Latest Posts

ವಿಶ್ವಾಸ ಸಂರಕ್ಷಣೆಗೆ ಜೀವನಶುದ್ದಿ ಅತ್ಯಗತ್ಯ: ಜಿಫ್ರಿ ತಂಙಳ್

ಚೇಳಾರಿ: ಭೌತಿಕವಾದ ಭಾವೋದ್ರೇಕಗಳಿಲ್ಲದ ವಿಧ್ವಾಂಸರ ಮೂಲಕವೂ ಮತ್ತು ದೇವರಲ್ಲಿ ಪ್ರಾಮಾಣಿಕ ವಿಶ್ವಾಸವನ್ನು ಉಳಿಸಿಕೊಳ್ಳುವ ಸಾಮಾನ್ಯ ಜನರ ಮೂಲಕವೂ ಇಸ್ಲಾಮಿನ ವಿಶ್ವಾಸಗಳನ್ನು ರಕ್ಷಿಸಲಾಗಿದೆ ಮತ್ತು ಅದರ ಕಡೆಗಿರುವ ನಮ್ಮ ಜೀವನ ಶೈಲಿಯನ್ನು ಬದಲಾಯಿಸಬೇಕು ಎಂದು ಸಮಸ್ತ ಅಧ್ಯಕ್ಷರಾದ ಸೈಯ್ಯದ್ ಮುಹಮ್ಮದ್ ಜಿಫ್ರಿ ಮುತ್ತುಕೋಯಾ ತಂಙಳ್ ಹೇಳಿದರು.ಸಮಸ್ತ ಜಂಇಯ್ಯತುಲ್ ಮುಅಲ್ಲಿಮೀನ್ ಸೆಂಟ್ರಲ್ ಕೌನ್ಸಿಲಿನ 62 ನೇ ವಾರ್ಷಿಕ ಕೌನ್ಸಿಲ್ ಉದ್ಘಾಟನೆ ನಡೆಸಿ ಈ ಮಾತನ್ನು ಹೇಳಿದರು.

ಕೆಟ್ಟದಾಗಿರಲಿ, ಒಳ್ಳೆಯದಾಗಿರಲಿ ವ್ಯಕ್ತಿಯ ನಡವಳಿಕೆಯನ್ನು ಅಳೆದು ಆ ವ್ಯಕ್ತಿ ಪ್ರತಿನಿಧಿಸುವ ಸಂಸ್ಥೆ ಮತ್ತು ಧರ್ಮದೊಂದಿಗೆ ಸೇರಿಸುವ ಮೂಲಕ ಪ್ರಚಾರ ಮಾಡುವ ಕಾಲವಾಗಿದೆ ಇಂದಿನ ಸಮೂಹ.

ಪ್ರವಾದಿ ಜೀವನವನ್ನು ಅನುಸರಿಸುವ ಸಮುದಾಯದ ಸೃಷ್ಟಿಗೆ ಬೇಕಾಗಿ ಸಮಸ್ತ ಕಾರ್ಯಾಚರಣೆ ನಡೆಸುತ್ತಿರುವುದು. ಅದು ಸಾಧಿಸುವಲ್ಲಿ ಮದ್ರಸಾ ಅಧ್ಯಾಪಕರು ಸ್ಪಷ್ಟವಾದ ಮಹತ್ವದ ಪಾತ್ರವನ್ನು ಹೊಂದಿದ್ದಾರೆ ಮತ್ತು ಸಮುದಾಯಕ್ಕೆ ಮಾದರಿಯಾಗಲು ಎಲ್ಲರಿಗೂ ಸಾಧ್ಯವಾಗಬೇಕು ಎಂದು ಹೇಳಿದರು.

ಸಮಸ್ತ ಕೇರಳ ಜಂಇಯ್ಯತುಲ್ ಮುಅಲ್ಲಿಮೀನ್ ಸೆಂಟ್ರಲ್ ಕೌನ್ಸಿಲಿನ 62 ನೇ ವಾರ್ಷಿಕ ಕೌನ್ಸಿಲ್ ಉದ್ಘಾಟನೆ ಸಂದರ್ಭದಲ್ಲಿ ಈ ಮಾತುಗಳನ್ನು ತಂಙಳ್ ಹೇಳಿದ್ದಾರೆ.

Share this on:
error: Content is protected !!