Latest Posts

ಉತ್ತರಾಖಂಡ್: ಸಿಎಂ ಆದ ನಾಲ್ಕೇ ತಿಂಗಳಲ್ಲಿ ತೀರಥ್ ಸಿಂಗ್ ರಾವತ್ ರಾಜಿನಾಮೆ

ಸಿಎಂ ಆದ ಕೇವಲ ನಾಲ್ಕೇ ತಿಂಗಳಲ್ಲಿ ಉತ್ತರಾಖಂಡ್​​ನ ಸಿಎಂ ತೀರಥ್ ಸಿಂಗ್ ರಾವತ್ ರಾಜೀನಾಮೆ ನೀಡಿದ್ದಾರೆ.

ಈಗ ಸಂಸದರಾಗಿರುವ ರಾವತ್‌ ಸಿಎಂ ಗದ್ದುಗೆಯಲ್ಲಿ ಮುಂದುವರಿಯಲು ಸೆಪ್ಟೆಂಬರ್ 10ರೊಳಗೆ ಶಾಸಕರಾಗಿ ಆಯ್ಕೆಯಾಗಬೇಕಾಗಿದೆ. ಆದರೆ ಕೊರೊನಾದಿಂದಾಗಿ ಗಂಗೋತ್ರಿ ಮತ್ತು ಹಲ್ದವಾನಿ ಕ್ಷೇತ್ರಗಳ ಉಪ ಚುನಾವಣೆಯನ್ನು ಚುನಾವಣೆ ಆಯೋಗ ಮುಂದೂಡಿದ್ದು, ತೀರಥ್ ಪಾಲಿಗೆ ಸಿಎಂ ಸ್ಥಾನ ತ್ಯಜಿಸಬೇಕಾದ ಅನಿವಾರ್ಯತೆ ಇದೆ.

ಉಪಚುನಾವಣೆ ನಡೆಯದಿದ್ದರೆ ಬಿಜೆಪಿ ಹೈಕಮಾಂಡ್​​ಗೂ ನಾಯಕತ್ವ ಬದಲಾವಣೆ ಅನಿವಾರ್ಯವಾಗಲಿದ್ದು, ಶಾಸಕರಲ್ಲಿ ಒಬ್ಬರನ್ನು ಮುಖ್ಯಮಂತ್ರಿಯನ್ನಾಗಿ ಮಾಡಬೇಕಿದೆ.  ಇಂದು ಡೆಹ್ರಾಡೂನ್​​ನಲ್ಲಿ ಶಾಸಕಾಂಗ ಪಕ್ಷದ ಸಭೆ ನಡೆಯಲಿದ್ದು, ಮುಂದಿನ ಸಿಎಂ ಯಾರು ಅನ್ನೋದು ಗೊತ್ತಾಗಲಿದೆ.

Share this on:
error: Content is protected !!