ಉತ್ತರಾಖಂಡದ ನೂತನ ಮುಖ್ಯಮಂತ್ರಿ ಪುಷ್ಕರ್ ಸಿಂಗ್ ಧೋಮಿ ಪ್ರಮಾಣ ವಚನ ಸ್ವೀಕರಿಸುವ ಮೊದಲೇ ವಿವಾದದ ಸುಳಿಯಲ್ಲಿ ಸಿಲುಕಿಕೊಂಡಿದ್ದಾರೆ. ಆರು ವರ್ಷಗಳ ಹಿಂದೆ ಪುಷ್ಕರ್ ಅವರು ‘ಯೂನಿಫೈಡ್ ಇಂಡಿಯಾ’ ಎಂಬ ನಕ್ಷೆಯನ್ನು ಟ್ವೀಟ್ ಮಾಡಿದ್ದು, ಇದು ಭಾರತದ ಪ್ರಮುಖ ಭಾಗಗಳನ್ನು ಹೊರತುಪಡಿಸಿದೆ.ಲಡಾಖ್ ಸೇರಿದಂತೆ ಕೆಲವು ಪ್ರದೇಶಗಳನ್ನು ಬಿಳಿ ರೇಖೆಯಿಂದ ಗುರುತಿಸಿರುವ ಭಾರತೀಯ ನಕ್ಷೆಯಿಂದ ಕೈಬಿಡಲಾಗಿದೆ. ಭಾರತದ ವಿಕೃತ ನಕ್ಷೆಯನ್ನು ಪ್ರಕಟಿಸಿದ್ದಕ್ಕಾಗಿ ಟ್ವಿಟರ್ ವಿರುದ್ಧ ಎರಡು ಪೊಲೀಸ್ ಪ್ರಕರಣಗಳು ಕೂಡಾ ದಾಖಲಾಗಿವೆ.
ನಾಲ್ಕು ತಿಂಗಳಲ್ಲಿ ಉತ್ತರಾಖಂಡದ ಮೂರನೇ ಮುಖ್ಯಮಂತ್ರಿ ಪುಷ್ಕರ್ ಭಾನುವಾರ ಸಂಜೆ ಪ್ರಮಾಣ ವಚನ ಸ್ವೀಕರಿಸಿದ್ದಾರೆ. ರಾಜ್ಯ ಬಿಜೆಪಿಯಲ್ಲಿನ ಬಿರುಕು ಹಿನ್ನೆಲೆಯಲ್ಲಿ ತಿರತ್ ಸಿಂಗ್ ರಾವತ್ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿದ ಹಿನ್ನೆಲೆಯಲ್ಲಿ 45 ವರ್ಷದ ಪುಷ್ಕರ್ ಮುಖ್ಯಮಂತ್ರಿಯಾಗಿ ಆಯ್ಕೆಯಾದರು.