Latest Posts

ಬದಲಾದ ಗೋವಾ ರಾಜಕೀಯ..!
ಆಮ್ ಆದ್ಮಿ ಪಕ್ಷ ತೊರೆದು ಕಾಂಗ್ರೆಸ್ ಸೇರಿದ ಗೋವಾದ ಆರು ಪ್ರಮುಖ ಆಪ್ ನಾಯಕರು

ಗೋವಾದ ಖ್ಯಾತ ಕೊಂಕಣಿ ಲೇಖಕ ದಿಲೀಪ್ ಬೋರ್ಕರ್ ಕಾಂಗ್ರೆಸ್ ಸೇರ್ಪಡೆ

ಮಾರ್ಗಾವೊ: ಮಹತ್ವದ ಬೆಳವಣಿಗೆ ಒಂದರಲ್ಲಿ ಗೋವಾ ಪ್ರದೇಶ ಕಾಂಗ್ರೆಸ್ ಸಮಿತಿಯ ಅಧ್ಯಕ್ಷ ಗಿರೀಶ್ ಚೋಡಂಕರ್ ಸಮ್ಮುಖದಲ್ಲಿ ಬುಧವಾರ ಆಮ್ ಆದ್ಮಿ ಪಕ್ಷವನ್ನು (ಎಎಪಿ) ತೊರೆದು ಆರು ಪ್ರಮುಖ ನಾಯಕರು ಕಾಂಗ್ರೆಸ್ ಸೇರಿದರು.
ಈ ಸಂದರ್ಭದಲ್ಲಿ ಎಎಪಿಯ ನೀಚ ರಾಜಕೀಯ ನಡೆಯನ್ನು, ಎಎಪಿ ಚುನಾವಣಾ ಸುಳ್ಳು ಭರವಸೆಗಳನ್ನು ಟೀಕಿಸಿದ ಕಾಂಗ್ರೆಸ್ ನಾಯಕ ಮೊದಲು ದೆಹಲಿಯಲ್ಲಿ ಯೋಜನೆಯನ್ನು ಜಾರಿಗೆ ತಂದು, ನಂತರ ಗೋವಾದಲ್ಲಿ ತನ್ನಿ ಎಂದು ಸವಾಲು ಹಾಕಿದರು.

ಕ್ಸೇವಿಯರ್ ಫೆರ್ನಾಂಡಿಸ್, ರಾಡ್ನಿ ಅಲ್ಮೇಡಾ, ಸಿದ್ಧಾರ್ಥ್ ಕರಾಪುರ್ಕರ್, ಮೆಲ್ವಿನ್ ಪೆರೇರಾ, ಟ್ರಿಬಿಯೊ ಗೋಸ್ ಮತ್ತು ರೊಸಾರಿಯೊ ಫೆರ್ನಾಂಡಿಸ್, ದಕ್ಷಿಣ ಗೋವಾದ ರಾಮಿರೊ ಮಸ್ಕರೇನ್ಹಸ್ ಅವರು ಗೋವಾ ಪ್ರದೇಶ ಕಾಂಗ್ರೆಸ್ ಅಧ್ಯಕ್ಷ ಜೋಡಂಕರ್, ಕಾರ್ಯಾಧ್ಯಕ್ಷ ಅಲೆಕ್ಸೊ ಸಿಕ್ವೇರಾ ಮತ್ತು ಎಲ್ವಿಸ್ ಗೋಮ್ಸ್ ಅವರ ಸಮ್ಮುಖದಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಗೊಂಡರು.

ಕೊನೆಗೆ ಮಾಧ್ಯಮಗಳೊಂದಿಗೆ ಮಾತನಾಡಿದ ಪಕ್ಷದ ಅಧ್ಯಕ್ಷರು, ಎಎಪಿ ಮತ್ತು ಬಿಜೆಪಿ ಸುಳ್ಳು ಭರವಸೆ ನೀಡಿ ಜನರನ್ನು ಮರುಳು ಮಾಡುತ್ತಿದ್ದಾರೆ ಎಂದು ಆರೋಪಿಸಿದರು.


Ll”ತಮ್ಮ ಪಕ್ಷ ಅಧಿಕಾರದಲ್ಲಿರುವ ದೆಹಲಿಯಲ್ಲಿ ಮೊದಲು ಯೋಜನೆಗಳನ್ನು ಜಾರಿಗೊಳಿಸುವುದನ್ನು ಬಿಟ್ಟು ಗೋವಾದಲ್ಲಿ ಜಾರಿಗೊಳಿಸ ಹೊರಟಿರುವ ಎಎಪಿ ಎಡಬಿಡಂಗಿತನದ ನಡೆಯ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದರು. ಬಿಜೆಪಿಯವರು ಸುಳ್ಳು ಭರವಸೆಗಳನ್ನು ನೀಡುತ್ತಿದ್ದಾರೆ ಎಂದೂ ಇದೇ ಸಂದರ್ಭದಲ್ಲಿ ಆರೋಪಿಸಿದರು.

ಎಲ್ವಿಸ್ ಗೋಮ್ಸ್ ಅವರು 10-ಪಕ್ಷಾಂತರಿಗಳಿಗೆ ಸಂಬಂಧಿಸಿದ ವಿಷಯವನ್ನು ಈಗಾಗಲೇ ಪಕ್ಷದ ಚುನಾವಣಾ ವೀಕ್ಷಕ ಪಿ ಚಿದಂಬರಂ ಸ್ಪಷ್ಟಪಡಿಸಿದ್ದಾರೆ ಎಂದು ಹೇಳಿದರು.
ಗೋವಾದ ಜನರಿಗೆ ಹೊರಗಿನವರು ಪೊಳ್ಳು ಭರವಸೆಗಳನ್ನು ನೀಡುವುದನ್ನು ನಾವು ಬಯಸುವುದಿಲ್ಲ, ಏಕೆಂದರೆ ಗೋವಾ ಜನರು ಅದನ್ನು ಮಾಡಲು ಸಾಕಷ್ಟು ಸಮರ್ಥರಾಗಿದ್ದಾರೆ. ಇದು ವಿಭಜಿಸುವ ಸಮಯವಲ್ಲ.
ಬದಲಾಗಿ ಇದು ಬಿಜೆಪಿ ವಿರುದ್ಧ ಒಗ್ಗಟ್ಟಾಗಿ ಹೋರಾಡುವ ಸಮಯ.
ಆದರೆ, ಬಿಜೆಪಿಯನ್ನು ತರಲು ಕೆಲವು ಪಕ್ಷಗಳಿಂದ ಪ್ರಯತ್ನಗಳು ನಡೆಯುತ್ತಿವೆ ಹಾಗೂ ಜನರ ನಡುವೆ ವಿಭಜನೆಯನ್ನು ಸೃಷ್ಟಿಸುವ ಮೂಲಕ ಅಧಿಕಾರಕ್ಕೆ ಬರುವ ವಿಫಲ ಪ್ರಯತ್ನಕ್ಕೆ ಕೈ ಹಾಕಿದೆ ಎಂದು ಎಲ್ವಿಸ್ ಅವರು ಹೇಳಿದರು.
ಹೊಸ ಮುಖಗಳು ಮತ್ತು ಯುವಕರು ಪಕ್ಷಕ್ಕೆ ಸೇರುವುದರಿಂದ ಕಾಂಗ್ರೆಸ್ ಬಲಗೊಳ್ಳುತ್ತದೆ ಎಂದು ಅವರು ಹೇಳಿದರು.
ಎಲ್ಲರೂ ಒಟ್ಟಾಗಿ ಕೈಜೋಡಿಸಬೇಕೆಂದು ಮನವಿ ಮಾಡಿದರು.

ಆರು ಮಾಜಿ ಎಎಪಿ ನಾಯಕರನ್ನು ಪಕ್ಷಕ್ಕೆ ಸ್ವಾಗತಿಸಿದ ಅಲೆಕ್ಸೊ ಸಿಕ್ವೇರಾ ಮುಂದಿನ ದಿನಗಳಲ್ಲಿ ಇನ್ನಷ್ಟು ಪಕ್ಷವು ಬಲಗೊಳ್ಳಲಿದೆ ಎಂದು ಹೇಳಿದರು.

ರಾಮಿರೊ ಮಸ್ಕರೇನ್ಹಸ್, ಸಿದ್ಧಾರ್ಥ್ ಕರಾಪುರ್ಕರ್, ರೊಸಾರಿಯೊ ಫೆರ್ನಾಂಡಿಸ್ ಮತ್ತು ಇತರರು ಕೂಡ ತಮ್ಮ ತಮ್ಮ ಅಭಿಪ್ರಾಯಗಳನ್ನು ಈ ಸಂಧರ್ಭದಲ್ಲಿ ವ್ಯಕ್ತಪಡಿಸಿದರು.

Share this on:
error: Content is protected !!