ಶೈಖುನಾ ಪಿ.ಕೆ ಮೂಸ ಕುಟ್ಟಿ ಹಝ್ರತ್ ಬಾಖವಿಯವರನ್ನು ಪ್ರತಿಷ್ಟಿತ ಸಮಸ್ತ ಕೇರಳ ವಿದ್ಯಾಬ್ಯಾಸ ಬೋರ್ಡ್ ಇದರ ನೂತನ ಅದ್ಯಕ್ಷರಾಗಿ ಆಯ್ಕೆ ಮಾಡಲಾಗಿದೆ.
ಈ ಸ್ಥಾನವನ್ನು ನಿರ್ವಹಿಸಿದ್ದ ಶೈಖುನಾ ಪಿ ಕೆ ಪಿ ಅಬ್ದುಸ್ಸಲಾಂ ಉಸ್ತಾದರು ಇತ್ತೀಚೆಗೆ ವಫಾತಾಗಿದ್ದು, ಅದರಿಂದ ಖಾಲಿ ಇದ್ದ ಆ ಸ್ಥಾನವನ್ನು ಈ ಮೂಲಕ ತುಂಬಿಸಿದಂತಾಗಿದೆ.
ಕೋಝಿಕ್ಕೋಡು ಸಮಸ್ತಾಲಯದಲ್ಲಿ ಸೇರಿದ ಕಾರ್ಯಕಾರಿ ಸಭೆಯಲ್ಲಿ ಈ ತೀರ್ಮಾನ ಕೈಗೊಳ್ಳಲಾಗಿದೆ.
ಶೈಖುನಾರ ಜೀವನ ಚರಿತ್ರೆ
ಮಲಪುರಂ ಏ ಆರ್ ನಗರ ಕೊಲಪುರಂ ಸೌತ್ ಪಂಡಾರಂತೋಡಿ ಕೊಳಕಾಡ್ ಕುಂಞಿ ಮುಹಮ್ಮದ್ ಮುಸ್ಲಿಯಾರ್ ಖದೀಜ ದಂಪತಿಗಳ ಮಗನಾಗಿ 1949 ರಲ್ಲಿ ಜನನ.
ಕೊಳುಪುರಂ ಸೌತ್,ಪಾಲಚಿರುಮಾಡ್, ಪುಗಯೂರು,ಕಿನಮಂಜೇರಿ,ಚೆಂಗಡವು ಮುಂತಾದೆಡೆ ಪ್ರಾಥಮಿಕ ವಿದ್ಯಾಭ್ಯಾಸ ಮುಗಿಸಿ ಉನ್ನತ ವ್ಯಾಸಂಗಕ್ಕಾಗಿ ವೆಲ್ಲೂರ್ ಬಾಖಿಯಾತ್ ಸ್ವಾಲಿಹಾತ್ ನಲ್ಲಿ 1969 ರಲ್ಲಿ ಸೇರ್ಪಡೆ ಗೊಂಡರು.
1971 ರಲ್ಲಿ ಬಾಖವಿ ಬರುದು ಗಳಿಸಿದರು.
ಕುಞಿ ಸೂಪಿ ಮುಸ್ಲಿಯಾರ್ ಕೈಪಟ್ಟ, ಅಲವಿ ಮುಸ್ಲಿಯಾರ್ ಇರಿಙಲ್ಲೂರು, ಓಕೆ ಅಬ್ದುಲ್ ರಹಿಮಾನ್ ಮುಸ್ಲಿಯಾರ್ ಊರಗಂ,ಶೈಖ್ ಹಸನ್ ಹಝ್ರತ್,ಇರುಂಬಝಿ ಕುಟ್ಟಿ ಮುಸ್ಲಿಯಾರ್,ಭಕ್ತಿಯಾರ್ ಹಝ್ರತ್ ಮೊದಲಾದವರು ಪ್ರಮುಖ ಗುರುವರ್ಯರು.
ಪಾಪಿನಿಶ್ಸೇರಿ,ಚಾಲಿಯಾಪುರಂ,ಮುಡಕ್ಕುಂಡುಙಲ್, ಪೆರಿಙಮಲ,ವೆಲ್ಲೂರು ಲತೀಪಿಯ್ಯಾ,ಬಾಖಿಯಾತುಸ್ಸಾಲಿಹಾತ್,ತಿರುವನಂತಪುರಂ ಮನ್ನಾನಿಯ್ಯಾ ಕಾಲೇಜ್ ಮೊದಲಾದೆಡೆ ನಲ್ವತ್ತು ವರ್ಷಗಳ ಕಾಲ ಗುರುವರ್ಯರಾಗಿ ಸಾವಿರಾರು ಶಿಷ್ಯ ವೃಂದವನ್ನು ಪಡೆದ ನಂತರ 1999 ರಿಂದ ಪ್ರತಿಷ್ಟಿತ ನಂದಿ ದಾರುಸ್ಸಲಾಂ ಅರಬಿಕ್ ಕಾಲೇಜಿನಲ್ಲಿ ಪ್ರಾನ್ಸುಪಾಲರಾಗಿ ಸೇವೆಗೈಯ್ಯುತ್ತಿದ್ದಾರೆ.
ಸಮಸ್ತ ಕೇಂದ್ರ ಮುಶಾವರ ಸದಸ್ಯರೂ ಆದ ಶ್ರೀಯುತರು ಅರೇಬಿಕ್,ಇಂಗ್ಲಿಷ್, ಉರ್ದು,ಮಲಯಾಳ ಭಾಷೆಗಳಲ್ಲಿ ಪ್ರಾವೀಣ್ಯತೆ ಪಡೆದಿದ್ದು ಹಲವು ಗ್ರಂಥಗಳನ್ನು ರಚಿಸಿದ್ದಾರೆ.
ಶೈಖನಾರನ್ನು ಈ ಪ್ರತಿಷ್ಟಿತ ಹುದ್ದೆಗೆ ಆಯ್ಕೆ ಮಾಡಿದ್ದನ್ನು ರಾಜ್ಯ ದಾರಿಮಿ ಉಲಮಾ ಒಕ್ಕೂಟ ಸ್ವಾಗತಿಸಿದೆ.
ಶೈಖುನಾ ಪಿ ಕೆ ಮೂಸ ಕುಟ್ಟಿ ಹಝ್ರತ್ ಸಮಸ್ತ ವಿದ್ಯಾಭ್ಯಾಸ ಬೋರ್ಡ್ ನೂತನ ಅದ್ಯಕ್ಷರಾಗಿ ಆಯ್ಕೆ
ರಾಜ್ಯ ದಾರಿಮಿ ಉಲಮಾ ಒಕ್ಕೂಟ ಸ್ವಾಗತ
