Latest Posts

ರಾಜ್ಯದಲ್ಲಿ ಇಂದು 8,580 ಮಂದಿಗೆ ಕೊರೊನಾ ಪಾಸಿಟಿವ್, 133 ಮಂದಿ ಬಲಿ

ಬೆಂಗಳೂರು : ರಾಜ್ಯದಲ್ಲಿಂದು 8,580 ಮಂದಿಗೆ ಕೊರೊನಾ ಸೋಂಕು ದೃಢಪಟ್ಟಿದೆ. ಈ ಮೂಲಕ ರಾಜ್ಯದಲ್ಲಿ ಒಟ್ಟು ಸೋಂಕಿತರ ಸಂಖ್ಯೆ 3,00406 ಕ್ಕೇರಿದೆ. ಇಂದು ಕೊರೊನಾಗೆ 133 ಮಂದಿ ಬಲಿಯಾಗಿದ್ದು, ಇದುವರೆಗೂ ಒಟ್ಟು 5,091 ಮಂದಿ ಕೋವಿಡ್ ನಿಂದ ಸಾವನ್ನಪ್ಪಿದ್ದಾರೆ. ಸದ್ಯ ರಾಜ್ಯದಲ್ಲಿ 83,608 ಕೊರೊನಾ ಪಾಸಿಟಿವ್ ಕೇಸುಗಳಿದ್ದು, 2,11,688 ಮಂದಿ ಗುಣಮುಖರಾಗಿದ್ದಾರೆ. ಇಂದು 7,249 ಮಂದಿ ಡಿಸ್ಚಾರ್ಜ್ ಆಗಿದ್ದಾರೆ.

ಬೆಂಗಳೂರಿನಲ್ಲಿಂದು ಅತೀ ಹೆಚ್ಚು ಕೇಸುಗಳು ದಾಖಲಾಗಿವೆ. 3,284 ಹೊಸ ಪ್ರಕರಣಗಳು ವರದಿಯಾಗಿವೆ. ಈ ಮೂಲಕ ಒಟ್ಟು ಪ್ರಕರಣಗಳ ಸಂಖ್ಯೆ 1,15,371ಕ್ಕೇರಿದೆ. ಇಂದು 31 ಮಂದಿ ಬಲಿಯಾಗಿದ್ದಾರೆ. ಸದ್ಯ ರಾಜಧಾನಿಯಲ್ಲಿ 36,053 ಪಾಸಿಟಿವ್ ಕೇಸುಗಳಿದ್ದು, 77,531 ಮಂದಿ ಗುಣಮುಖರಾಗಿದ್ದಾರೆ. ಇಂದು 2,630 ಡಿಸ್ಚಾರ್ಜ್ ಆಗಿದ್ದು, ಇದುವರೆಗೂ ಒಟ್ಟು 1,786 ಮಂದಿ ಬಲಿಯಾಗಿದ್ದಾರೆ.

Share this on:
error: Content is protected !!