Latest Posts

ಜನಿಸಿದ ಮೂರೇ ಗಂಟೆಯಲ್ಲಿ ಶಿಶು ಕೊರೊನಾಗೆ ಬಲಿ

ಬೆಂಗಳೂರು ಜನಿಸಿದ ಮೂರು ಗಂಟೆಯಲ್ಲೇ ಕೊರೊನಾ ಸೋಂಕಿನಿಂದ ನವಜಾತ ಶಿಶು ಸಾವನ್ನಪ್ಪಿದ ಕರುಣಾಜನಕ ಘಟನೆ ನಗರದ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ನಡೆದಿದೆ.

ದೊಡ್ಡಬಳ್ಳಾಪುರ ಮೂಲದ ದಂಪತಿಗೆ ಕೊರೊನಾ ಪಾಸಿಟಿವ್ ಇತ್ತು. ಈ ನಡುವೆ ಈ ದಂಪತಿಗೆ ಜನಿಸಿದ ಮಗುವಿಗೂ ಕೊರೊನಾ ಸೋಂಕು ತಗುಲಿದ್ದು ಜನಿಸಿದ 3 ಗಂಟೆಯಲ್ಲೇ ಪ್ರಾಣ ಬಿಟ್ಟಿದ್ದು ಕಣ್ಣು ಬಿಟ್ಟು ನೋಡುವುದರೊಳಗಾಗಿ ಕೊರೊನಾ ಬಲಿ ತೆಗೆದುಕೊಂಡಿತು.

ದುರಂತವೆಂದರೆ ಈ ಮಗುವನ್ನು ಪೋಷಕರು, ಸಂಬಂಕರು ಯಾರೂ ನೋಡಲಾಗಲಿಲ್ಲ, ಅಂತ್ಯಸಂಸ್ಕಾರವನ್ನೂ ಮಾಡಲಾಗಲಿಲ್ಲ.
ಚಾಮರಾಜಪೇಟೆಯ ಶಾಸಕ ಜಮೀರ್ ಅವರ ತಂಡ ಹಿಂದೂ ಸಂಪ್ರದಾಯದಂತೆ ಈ ಮಗುವಿನ ಅಂತ್ಯಕ್ರಿಯೆ ನೆರವೇರಿಸಿದರು.

ಆಂಬ್ಯುಲೆನ್ಸ್ ಸಿಬ್ಬಂದಿಗಳೇ ಮಗುವಿನ ಅಂತ್ಯಕ್ರಿಯೆಯಲ್ಲಿ ಪಾಲ್ಗೊಂಡರು. ಹುಟ್ಟಿದ ಮೂರು ಗಂಟೆಯಲ್ಲೇ ಈ ಮಗು ಕೊರೊನಾಕ್ಕೆ ಬಲಿಯಾಗಿದ್ದು ದುರಂತ.

Share this on:
error: Content is protected !!