Latest Posts

ಆಶಾ ಕಾರ್ಯಕರ್ತರಿಗೆ ಜನರ ಸಹಕಾರ ಅತ್ಯಗತ್ಯವಾಗಿದೆ, ಜೊತೆಗೆ ರಾಜ್ಯ ಸರಕಾರ ಆಶಾ ಕಾರ್ಯಕರ್ತರಿಗೆ ಸೂಕ್ತ ವೇತನ ನೀಡಬೇಕು-ಜಿ.ಎ ಶಂಸುದ್ದೀನ್ ಅಜ್ಜಿನಡ್ಕ

ವಿಟ್ಲ:- ಕರ್ನಾಟಕ ರಾಜ್ಯದ  ಪ್ರತಿ
ಗ್ರಾಮಗಳಲ್ಲಿ ಆಶಾ ಕಾರ್ಯಕರ್ತರು ಆರೋಗ್ಯವಂತ ಸಮಾಜ ನಿರ್ಮಾಣಕ್ಕಾಗಿ ಹಗಲು ರಾತ್ರಿ ಎನ್ನದೇ ಶ್ರಮಿಸುತ್ತಿದ್ದು ಇಂತಹ ಸಮಯದಲ್ಲಿ ಆಶಾ ಕಾರ್ಯಕರ್ತರಿಗೆ ಜನರ ಸಹಕಾರ ಅತ್ಯಗತ್ಯವಾಗಿದೆ ಹಾಗೂ ರಾಜ್ಯ ಸರ್ಕಾರವು ‌ಆಶಾ ಕಾರ್ಯಕರ್ತರಿಗೆ ಸೂಕ್ತವಾದ ವೇತನ ಹೆಚ್ಚಳ ಮಾಡಬೇಕಾಗಿದೆ ಎಂದು ಸಾಮಾಜಿಕ ಕಾರ್ಯಕರ್ತರಾದ ಜಿ.ಎ ಶಂಸುದ್ದೀನ್ ಅಜ್ಜಿನಡ್ಕ ಅವರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ

ಪತ್ರಿಕಾ ಹೇಳಿಕೆಯ ಮೂಲಕ ಮಾತನಾಡಿದ ಜಿ.ಎ ಶಂಸುದ್ದೀನ್ ಅಜ್ಜಿನಡ್ಕ ನಿಜವಾಗಿಯೂ ಆಶಾ ಕಾರ್ಯಕರ್ತರು ಜನಸಾಮಾನ್ಯರ ಆರೋಗ್ಯದ ವಿಚಾರದಲ್ಲಿ ,ಊರಿನ ಸ್ವಚತೆಯ ವಿಚಾರದಲ್ಲಿ, ಪ್ರತಿ ಮನೆಯ ಸ್ವಚ್ಚತೆಯ ವಿಚಾರದಲ್ಲಿ, ಜನಸಾಮಾನ್ಯರ ಸುರಕ್ಷತೆಗಾಗಿ, ಆರೋಗ್ಯವಂತ ಸಮಾಜ ನಿರ್ಮಾಣಕ್ಕಾಗಿ ದಿನನಿತ್ಯ ಕೆಲಸ ಮಾಡುತ್ತಿದ್ದಾರೆ ಇಂತಹ ಸಮಯದಲ್ಲಿ ಆಶಾ ಕಾರ್ಯಕರ್ತರಿಗೆ ಜನಸಾಮಾನ್ಯರು ಸಹಕಾರ ನೀಡುವ ಮೂಲಕ ಅವರ ಎಲ್ಲಾ ವಿಚಾರಗಳಿಗೆ ಸ್ಪಂದನೆ ನೀಡುವ ಕೆಲಸ ಮಾಡಬೇಕಾಗಿದೆ ಎಂದು ಜಿ.ಎ ಶಂಸುದ್ದೀನ್ ಅಜ್ಜಿನಡ್ಕ ಅವರು ಜನಸಮೂಹ ವಲಯಕ್ಕೆ ಮನವಿ ಮಾಡಿದ್ದಾರೆ.

ವಿಶೇಷವಾಗಿ ಆಶಾ ಕಾರ್ಯಕರ್ತರು ಪ್ರತಿ ಮನೆ ಮನೆ ಭೇಟಿಯ ಸಂದರ್ಭದಲ್ಲಿ ಅವರಿಗೆ ಪ್ರತಿಯೊಂದು ಆರೋಗ್ಯದ ವಿಚಾರಗಳನ್ನು ಜನಸಾಮಾನ್ಯರು ನೀಡುವ ಮೂಲಕ ಪೂರ್ಣ ಪ್ರಮಾಣದಲ್ಲಿ ಸಹಕಾರ ನೀಡಬೇಕಾದ ಜವಬ್ದಾರಿ ಅಗತ್ಯತೆ ಇದೆ ಈಗಾಗಿ ಮುಂದಿನ ದಿನಗಳಲ್ಲಿ ಪ್ರತಿಯೊಬ್ಬರು ಆಶಾ ಕಾರ್ಯಕರ್ತರಿಗೆ ಎಲ್ಲಾ ರೀತಿಯಲ್ಲಿ ಸಹಕಾರ ನೀಡಬೇಕು
ಜೊತೆಗೆ ಆಶಾ ಕಾರ್ಯಕರ್ತರು ಮನೆಗೆ ಭೇಟಿ ಮಾಡುವ ಸಂದರ್ಭದಲ್ಲಿ ಅವರ ಜೊತೆ ಜಗಳ ಮಾಡುವುದು ಅವರ ಮಾತಿಗೆ ಸ್ಪಂದನೆ ನೀಡದಿರುವುದು ಇವುಗಳನ್ನು ಯಾರು ಮಾಡದೇ ಸಹಕಾರ ನೀಡಬೇಕು ಇದುವೇ ನನ್ನ ಆಶಯ ಉದ್ದೇಶವಾಗಿದೆ ಎಂದರು

ಸರಕಾರ ಆಶಾ ಕಾರ್ಯಕರ್ತರಿಗೆ ಸೂಕ್ತ ವೇತನ ಹೆಚ್ಚಳ ಮಾಡುವ ಮೂಲಕ‌ ಆಶಾ ಕಾರ್ಯಕರ್ತರಿಗೆ ಸಂಕಷ್ಟಗಳು ಸಮಸ್ಯೆಗಳಿಗೆ ಸ್ಪಂದಿಸಬೇಕು ಎಂದು ಸಾಮಾಜಿಕ ಕಾರ್ಯಕರ್ತರಾದ ಜಿ.ಎ ಶಂಸುದ್ದೀನ್ ಅಜ್ಜಿನಡ್ಕ ಅವರು ಸರಕಾರಕ್ಕೆ ಮನವಿ ಮಾಡಿದ್ದಾರೆ.

Share this on:
error: Content is protected !!