ಉಡುಪಿ: SSF ಹೆಲ್ಪ್ ಡೆಸ್ಕ್ ಕರ್ನಾಟಕ, ಉಡುಪಿ ಜಿಲ್ಲಾ SSF , ಆಶ್ರಯದಲ್ಲಿ, ಇಂಡಿಯನ್ ರೆಡ್ ಕ್ರಾಸ್ ಸೊಸೈಟಿ ಕುಂದಾಪುರ ಸಹಭಾಗಿತ್ವದಲ್ಲಿ, SSF ಕಾಪು ಡಿವಿಷನ್ ಸಹಯೋಗದಲ್ಲಿ, ಇಂದು ಯಶಸ್ವಿಯಾಗಿ ರಕ್ತದಾನ ಶಿಬಿರ ನಡೆಯಿತು.
SSF ಉಡುಪಿ ಜಿಲ್ಲಾ ಕಾರ್ಯದರ್ಶಿ NC ರಹೀಮ್ ಸ್ವಾಗತಿಸಿದರು.

ಅಸಯ್ಯದ್ ಜಾಫರ್ ಅಸ್ಸಖಾಫ್ ತಂಙಳ್ ಕೋಟೇಶ್ವರ ರವರ ದುವಾದೊಂದಿಗೆ, SSF ಉಡುಪಿ ಜಿಲ್ಲಾಧ್ಯಕ್ಷರಾದ ಅಹ್ಮದ್ ಶಬೀರ್ ಸಖಾಫಿ ಪಣಿಯೂರು ರವರ ಅಧ್ಯಕ್ಷತೆಯಲ್ಲಿ ಉಡುಪಿ SSF ಬ್ಲಡ್ ಸೈಬೋ ಗೆ ಅಧಿಕೃತ ಚಾಲನೆ ನೀಡಲಾಯಿತು.
ಕಾರ್ಯಕ್ರಮದ ಉದ್ಘಾಟನೆ ಹಾಗೂ ಉಡುಪಿ ಜಿಲ್ಲಾ ಬ್ಲಡ್ ಸೈಬೋ ಉದ್ಘಾಟನೆಯನ್ನು ಕೋಟೇಶ್ವರ ತಂಙಳ್ ನೆರವೇರಿಸಿದರು.
ಈ ವೇಳೆ ಮಾತಾಡಿದ ಅಶ್ರಫ್ ಸಖಾಫಿ ಕಣ್ಣಂಗಾರ್ ರವರು, ರಕ್ತದಾನ ಮನುಷ್ಯ ಮನುಷ್ಯರಿಂದ ಮಾತ್ರ ಸಾಧ್ಯವಿರುವ ಧಾನವಾಗಿದೆ.
ಇಂದಿನ ಕಾಲದಲ್ಲಿ ಎಲ್ಲವನ್ನೂ ಉತ್ಪಾದಿಸಲಾಗುತ್ತದೆ, ಆದರೆ ರಕ್ತ ಮನುಷ್ಯನ ದೇಹದಲ್ಲಿ ಉತ್ಪಾದನೆ ಆಗಲು ಮಾತ್ರ ಸಾಧ್ಯ.
ಒಬ್ಬನ ಅನುಮತಿಯಿಲ್ಲದೆ ರಕ್ತದಾನ ಮಾಡಲು ಇಸ್ಲಾಮಿನಲ್ಲಿ ಅವಕಾಶ ಇಲ್ಲ, ಆದ್ದರಿಂದ ರಕ್ತವನ್ನು ನಾವೇ ಸ್ವಯಂಪ್ರೇರಿತವಾಗಿ ರಕ್ತದಾನ ಮಾಡಲು ಸಾಧ್ಯ, ಇಂತಹಾ ರಕ್ತದಾನ ಶಿಭಿರಗಳನ್ನು ಆಯೋಜಿಸುವ ಮೂಲಕ ನಾವು ಮಾನವ ಸ್ನೇಹಿಗಳಾಗೋಣ ಎಂದು ಕಾರ್ಯಕ್ರಮಕ್ಕೆ ಶುಭಕೋರಿದರು.
ಉದ್ಘಾಟನಾ ಮಾತನ್ನು ಆಡಿದ , ಕೋಟೇಶ್ವರ ತಂಙಳ್ ಇಂತಹಾ ಯಶಸ್ವಿ ಕಾರ್ಯಕ್ರಮಗಳನ್ನು ಸದಾ ಆಯೋಜಿಸೋಣ, ಈ ಮೂಲಕ ಅಲ್ಲಾಹನ ಸಂಪ್ರೀತಿಗೆ ಪಾತ್ರರಾಗೋಣ ಎಂದು ಹಾರೈಸಿದರು .
ವೇಧಿಕೆಯಲ್ಲಿದ್ದ ಅತಿಥಿಗಳಿಗೆ ಗುಲಾಭಿ ಹೂವನ್ನು ನೀಡುವ ಮೂಲಕ ಸನ್ಮಾನಿಸಲಾಯಿತು.
ಕಾರ್ಯಕ್ರಮ NC ರಹೀಮ್ ನಿರೂಪಿಸಿದರು.
SSF ಜಿಲ್ಲಾ ಕಾರ್ಯದರ್ಶಿ ರಕೀಬ್ ಕಣ್ಣಂಗಾರ್, ಧನ್ಯವಾದ ಮಾಡಿದರು.
ಉಡುಪಿ ಜಿಲ್ಲಾ ಬ್ಲಡ್ ಸೈಬೋದ ಮುಖ್ಯ ಚೆಯರ್ಮ್ಯಾನ್ ಅಬ್ಧುಲ್ ಮಜೀದ್ ಹನೀಫಿ ರಕ್ತದಾನ ಮಾಡುವ ಮೂಲಕ ರಕ್ತದಾನ ಶಿಭಿರಕ್ಕೆ ಚಾಲನೆ ನೀಡಿದರು.
ಶಾಹುಲ್ ಹಮೀದ್ ನಯೀಮಿ, ಅಬ್ಧುಲ್ ರಹಿಮಾನ್ ರಝ್ವಿ ಕಲ್ಕಟ್ಟ, ಅಶ್ರಫ್ ರಝಾ ಅಮ್ಜದಿ, ಹನೀಫ್ ಹಾಜಿ ಕನ್ನಂಗಾರ್, , ಹಾಜಿ ಕೆ ,ಮುಹುಯ್ಯುದ್ದೀನ್ ಗುಡ್ವೀಲ್, ಅಡ್ವೊಕೇಟ್ ಹಂಝ ಹೆಜಮಾಡಿ, ಕೇಶವ ಪಿ, ಸಾಲ್ಯಾನ್,ಅಬ್ಧುಲ್ ರವೂಫ್ ಮೂಡುಗೋಪಾಡಿ, ಹರೀಶ್ ಹೆಜಮಾಡಿ,ಡಾ, ಶರವಣ್, ಉಪಸ್ಥಿತರಿದ್ದರು