ಬೆಂಗಳೂರು: ಸ್ಯಾಂಡಲ್ ವುಡ್ ಡ್ರಗ್ಸ್ ದಂಧೆ ಆರೋಪದಲ್ಲಿ ನಟಿ ಐಂದ್ರಿತಾ ರೇ ಮತ್ತು ನಟ ದಿಗಂತ್ ಗೆ ಸಿಸಿಬಿ ವಿಚಾರಣೆಗೆ ಹಾಜರಾಗುವಂತೆ ನೋಟಿಸ್ ನೀಡಿದ್ದು, ಐಂದ್ರಿತಾ ಹಾಗೂ ದಿಗಂತ್ ವಿಚಾರಣೆಗೆ ಹಾಜರಾಗಿದ್ದಾರೆ.
ಹೌದು,ನಟಿ ರಾಗಿಣಿ , ಸಂಜನಾ ಬಳಿಕ ಇದೀಗ ನಟಿ ಐಂದ್ರಿತಾ ರೇ ಮತ್ತು ನಟ ದಿಗಂತ್ಗೆ ಸಂಕಷ್ಟಎದುರಾಗಿದೆ. ಪಾರ್ಟಿಯಲ್ಲಿ ನಟಿ ರಾಗಿಣಿ, ಸಂಜನಾ ಜೊತೆ ಐಂದ್ರಿತಾ ಕೂಡ ಭಾಗಿಯಾಗಿದ್ದಾರೆ ಎನ್ನಲಾಗಿದೆ. ಅಲ್ಲದೇ ವಿರೇನ್ ಖನ್ನಾ ಹೇಳಿಕೆಯಲ್ಲೂ ಐಂದ್ರಿತಾ ರೈ ಹೆಸರು ಕೇಳಿಬಂದಿದ್ದು, ಈ ಹಿನ್ನೆಲೆ ನಟಿ ಐಂದ್ರಿತಾ ರೇ ಮತ್ತು ನಟ ದಿಗಂತ್ಗೆ ನೋಟಿಸ್ ಜಾರಿ ಮಾಡಿದ್ದು, ಇಂದು ಸ್ಟಾರ್ ದಂಪತಿ 11 ಗಂಟೆಗೆ ಸಿಸಿಬಿ ವಿಚಾರಣೆಗೆ ಹಾಜರಾಗಿದ್ದಾರೆ.