Latest Posts

ಕುರ್ ಆನ್ ಅನ್ನು ರಾಜಕೀಯ ವಿವಾದಗಳಿಗೆ ಹಾಗೂ ಕೋಮುವಾದ ಪ್ರಚಾರಕ್ಕಾಗಿ ಬಳಸಬೇಡಿ – ಎಸ್.ಕೆ.ಎಸ್.ಎಸ್.ಎಫ್

ಕ್ಯಾಲಿಕಟ್: ಕೇರಳದಲ್ಲಿ ಸೌಹಾರ್ದತೆಗೆ ವಿರುಧ್ಧವಾಗಿ ಹಲವಾರು ಆರೋಪಗಳು ಕೇಳಿಬರುತ್ತಿದೆ.
ಚಿನ್ನ ಕಳ್ಳಸಾಗಣೆಯ ಪ್ರಕರಣದ ಬಗ್ಗೆ ಮಾಧ್ಯಮಗಳಲ್ಲಿ ನಡೆಯುತ್ತಿರುವ ಚರ್ಚೆಗಳು ವಿನಾಃಕಾರಣ ಕುರ್ ಆನ್ ನ್ನು ಎಳೆದುತರುತಿದ್ದಾರೆ.
ನಿಯಮದ ವಿರುಧ್ಧವಾಗಿ ಪ್ರಕ್ರಿಯೆಗಳು ನಡೆದಿದ್ದರೆ ಅದರ ಕುರಿತು ವಿಚಾರಣೆಗಳು ಕೃತ್ಯವಾಗಿ ಅದರ ದಾರಿಯಲ್ಲಿ ನಡೆಯಲಿ,
ಆದರೆ ಕೋಮುವಾದಿಗಳಿಗೆ ಅವಕಾಶ ನೀಡುವಂತಾಗಬಾರದು,ವಿಷಯವನ್ನ ದಾರಿ ತಪ್ಪಿಸಲು ಯಾರೂ ಶ್ರಮಿಸಬೇಡಿ ಎಂದು ನಿಯೋಗವು ಅಭಿಪ್ರಾಯ ಪಟ್ಟಿತು.
ಸೌಹಾರ್ದತೆ ಚಿಂತನೆಗಳಿಂದಾಗಿದೆ ಕೇರಳದಲ್ಲಿ ಕೋಮುವಾದ ಶಕ್ತಿಗಳಿಗೆ ನೆಲೆ ಇಲ್ಲದಾಗಿರುವುದು, ಪ್ರಸ್ಥುತವಾಗಿ ನಡೆಯುತ್ತಿರುವ ಬೆಳವಣಿಗೆಯಲ್ಲಿ ಕೋಮುವಾದಿ ಶಕ್ತಿಗಳಿಗೆ ಅವಸರ ನೀಡಿದರೆ ನಾವು ಬಯಸಿದ ಕೇರಳ ಅಪಾಯಕಾರಿ ಹಂತಕ್ಕೆ ಹೋಗಬಹುದು ಎಂದು ನಿಯೋಗವು ಪತ್ರಿಕಾಗೋಷ್ಟಿಯಲ್ಲಿ ಹೇಳಿತು.

ನಿಯೋಗದಲ್ಲಿ ಪಾಣಕ್ಕಾಡ್ ಸೈಯ್ಯದ್ ಹಮೀದಲಿ ಶಿಹಾಬ್ ತಂಙಳ್, ಖಾಸಿಂ ದಾರಿಮಿ ಮಂಗಳೂರು,ಸತ್ತಾರ್ ಪಂದಲ್ಲೂರು,ತಾಜುಧ್ಧೀನ್ ದಾರಿಮಿ ಪಾಟ್ನಾ ಮುಂತಾದ ನಾಯಕರಿದ್ದರು.

Share this on:
error: Content is protected !!