Latest Posts

ತೆಂಗಿನಕಾಯಿ ಕೊರತೆ ಇದೆ ಎನ್ನಲು ತೆಂಗಿನ ಮರವೇರಿದ ಸಚಿವ

ಕೊಲಂಬೋ: ದೇಶದಲ್ಲಿ ತೆಂಗಿನ ಕಾಯಿ ಕೊರತೆಯಿದೆ ಎಂಬ ಸಂದೇಶವನ್ನು ನೀಡಲು ಶ್ರೀಲಂಕಾದ ತೆಂಗು ಸಚಿವ ಅರುಂಧಿಕ ಫರ್ನಾಡೋ ತೆಂಗಿನ ಮರವೇರಿ ಭಾಷಣ ಮಾಡಿದ್ದಾರೆ. ಈ ವೇಳೆ ದೇಶದ ಸ್ಥಳೀಯ ಕೈಗಾರಿಕೆಗಳಿಗೆ ಹಾಗೂ ಬಳಕೆಗೆ 700 ಮಿಲಿಯನ್ ತೆಂಗಿನಕಾಯಿ ಕೊರತೆಯನ್ನು ಎದುರಿಸುತ್ತಿದೆ ಎಂದು ತಿಳಿಸಿದ್ದಾರೆ.

ದೇಶದಲ್ಲಿನ ಈ ಕೊರತೆ ನಿವಾರಿಸಲು ಎಲ್ಲೆಲ್ಲಿ ಖಾಲಿ ಪ್ರದೇಶ ಲಭ್ಯವಿದೆಯೋ ಆ ಭೂಮಿಯನ್ನು ತೆಂಗಿನಕಾಯಿ ಕೃಷಿಗೆ ಬಳಸಿಕೊಳ್ಳ ಬೇಕು. ಬೇರೆ ದೇಶಗಳಿಗೆ ರಫ್ತು ಮಾಡುವಷ್ಟೂ ನಾವು ತೆಂಗಿನ ಉತ್ಪಾದನೆಯನ್ನು ಮಾಡಬೇಕು ಎಂದು ದೇಶದ ಜನರಲ್ಲಿ ಮನವಿ ಮಾಡಿದ್ದಾರೆ.

ಸ್ಥಳೀಯ ಮಾಧ್ಯಮಗಳ ವರದಿ ಪ್ರಕಾರ ಸಚಿವರು ತೆಂಗಿನವೇರಲು ಹರಸಾಹಸಪಟ್ಟಿದ್ದು. ಜನಪ್ರತಿ ನಿಧಿಗಳು ಹಾಗೂ ಸ್ಥಳೀಯ ಸಹಾಯಮಾಡಿದ್ದಾರೆ ಎನ್ನಲಾಗಿದೆ.

Share this on:
error: Content is protected !!