Latest Posts

ಬಿಜೆಪಿಯಲ್ಲಿ ಮತ್ತೆ ಬಿರುಕು.?
ವಿಧಾನಸೌಧದಲ್ಲಿ ಕಾಂಗ್ರೆಸ್ ನಾಯಕರ ಎದುರುಗಡೆಯೇ ಬಿಜೆಪಿ ನಾಯಕರ ಒಳಜಗಳ ಸ್ಫೋಟ!!!

ಬೆಂಗಳೂರು : ವಿಧಾನಸೌಧದಲ್ಲಿ ಕಾಂಗ್ರೆಸ್ ನಾಯಕರ ಎದುರುಗಡೆಯೇ ಬಿಜೆಪಿ ನಾಯಕರ ಒಳಜಗಳ ಸ್ಫೋಟಗೊಂಡಿದೆ. ಬಿಜೆಪಿ ನಾಯಕರ ಒಳಜಗಳ ಇಂದು ವಿಧಾನಸೌಧದಲ್ಲೇ ಸ್ಫೋಟವಾಗಿದೆ . ವಿಧಾನಸಭೆ ಸೆಂಟ್ರಲ್ ಹಾಲ್ ಲಾಂಜ್ ನಲ್ಲಿ ವಿಪಕ್ಷ ನಾಯಕ ಸಿದ್ದರಾಮಯ್ಯನವರ ಎದುರುಗಡೆಯೇ ಬಿಜೆಪಿ ನಾಯಕರ ಗಲಾಟೆ ಮಾಡಿಕೊಂಡ ಪ್ರಸಂಗ ನಡೆದಿದೆ . ಕಡೂರು ಶಾಸಕ ಬೆಳ್ಳಿ ಪ್ರಕಾಶ್ ಹಾಗೂ ಸಚಿವ ನಾರಾಯಣಗೌಡ ನಡುವೆ ಗಲಾಟೆ ನಡೆದಿದ್ದು , ಮಾತಿನ ಚಕಮಕಿ ತಾರಕಕ್ಕೇರಿ ನಂತರ ಕುರ್ಚಿಗಳನ್ನು ತಳ್ಳಾಡುವಷ್ಟು ಸ್ವರೂಪ ಪಡೆದಿದೆ . ಯಾವ ವಿಚಾರಕ್ಕೆ ಈ ಗಲಾಟೆ ನಡೆದಿದೆ ಎಂದು ಸ್ಪಷ್ಟವಾಗಿಲ್ಲ .

ನೀನೇನು ಅಂತ ನಂಗ್ ಗೊತ್ತು ಅಸಮರ್ಥ ಸಚಿವ ನೀನು ಎಂದು ನಾರಾಯಣಗೌಡ ವಿರುದ್ಧ ಬೆಳ್ಳಿ ಪ್ರಕಾಶ್ ಆರೋಪ ಮಾಡಿದ್ದಾರೆ ಎನ್ನಲಾಗಿದೆ . ಈ ವೇಳೆ ಸಚಿವ ಮತ್ತು ಶಾಸಕರ ನಡುವೆ ಮಾತಿನ ಚಕಮಕಿ ನಡೆದಿದೆ .

ಕುಟುಂಬ ಹಸ್ತಕ್ಷೇಪದಿಂದಲೇ ಬಿಎಸ್ ವೈ ಅಧಿಕಾರ ಕಳೆದುಕೊಳ್ಳುತ್ತಾರೆ : ಧ್ರುವನಾರಾಯಣ್ ವಿಪಕ್ಷ ನಾಯಕ ಸಿದ್ದರಾಮಯ್ಯ , ಸಚಿವರಾದ ಈಶ್ವರಪ್ಪ , ಸೋಮಣ್ಣ ಸಮ್ಮುಖದಲ್ಲೇ ಗಲಾಟೆ ನಡೆದಿದೆ . ಇಬ್ಬರೂ ನಾಯಕರು ಚೇರ್ ಗಳನ್ನ ತಳ್ಳಿ ಹೊಡೆದಾಟಕ್ಕೆ ಯತ್ನ ಮಾಡಿದ್ದಾರೆ ಎಂದು ವರದಿಯಾಗಿದೆ .

ಕ್ಷೇತ್ರದ ಅಭಿವೃದ್ಧಿ ವಿಚಾರದಲ್ಲಿ ಗಲಾಟೆ ನಡೆಯಿತಾ ಅಥವಾ ಮೂಲ ಮತ್ತು ವಲಸಿಗ ಶಾಸಕರ ಬಿಕ್ಕಟ್ಟು ಕಾರಣವಾಗಿರಬಹುದೇ ಎಂಬ ಮಾತುಗಳು ವಿಧಾನಸೌಧದ ಪಡಸಾಲೆ ಕೇಳಿ ಬರುತ್ತಿದೆ

Share this on:
error: Content is protected !!