Latest Posts

ರೈತರ ಹೋರಾಟವನ್ನು ಬೆಂಬಲಿಸಿ ಐಕ್ಯ ವೇದಿಕೆಯಿಂದ ಬ್ರಹತ್ ಹೆದ್ದಾರಿ ತಡೆ ಚಳುವಳಿ

ರೈತ ಕಾರ್ಮಿಕ ವಿರೋಧಿ ಸುಗ್ರೀವಾಜ್ಞೆಗಳ ವಾಪಾಸಾತಿಗಾಗಿ,ಸಂಸದರನ್ನು ಅಮಾನತುಗೊಳಿಸಿದ ನರೇಂದ್ರ ಮೋದಿ ಸರಕಾರದ ಫ್ಯಾಸಿಸ್ಟ್ ನಡೆಯನ್ನು ಖಂಡಿಸಿ ರೈತ ಕಾರ್ಮಿಕ ದಲಿತ ವಿಧ್ಯಾರ್ಥಿ ಯುವಜನ ಮಹಿಳಾ ಸಂಘಟನೆಗಳು ಹಾಗೂ ವಿವಿಧ ಜಾತ್ಯಾತೀತ ಪಕ್ಷಗಳ ಐಕ್ಯ ವೇದಿಕೆಯಿಂದ ನಗರದಲ್ಲಿಂದು(25-09-2020) ನಂತೂರು ಜಂಕ್ಷನ್ ಬಳಿಯಲ್ಲಿ ಬ್ರಹತ್ ಹೆದ್ದಾರಿ ತಡೆ ಚಳುವಳಿ ನಡೆಯಿತು.ರೈತ ಕಾರ್ಮಿಕರ ವಿರೋಧಿಯಾದ ನರೇಂದ್ರ ಮೋದಿ ಸರಕಾರದ ವಿರುದ್ದ ಪ್ರತಿಭಟನಾಕಾರರು ಆಕ್ರೋಶಭರಿತರಾಗಿ ಘೋಷಣೆ ಕೂಗಿದರು.

ಪ್ರತಿಭಟನೆಯಲ್ಲಿ AIKS,ರಾಜ್ಯ ರೈತ ಸಂಘ, CITU, AITUC, INTUC,ದಲಿತ ಸಂಘಟನೆಗಳು, SFI,NSUI,DYFI,ಯುವ ಕಾಂಗ್ರೆಸ್,JMS,ಮಹಿಳಾ ಕಾಂಗ್ರೆಸ್, ಕನ್ನಡ ಪರ ಸಂಘಟನೆಗಳು,ರಾಜಕೀಯ ಪಕ್ಷಗಳಾದ ಕಾಂಗ್ರೆಸ್, CPIM, CPI,JDS,AAP, ಸಾಮಾಜಿಕ ಹೋರಾಟಗಾರರು,ಸಾಮಾಜಿಕ ಚಿಂತಕರು ಮೊದಲಾದವರು ಭಾಗವಹಿಸಿದ್ದರು.

Share this on:
error: Content is protected !!