Latest Posts

ಸೆಪ್ಟೆಂಬರ್ 28ರಂದು ಹಮ್ಮಿಕೊಂಡಿರುವ “ಕರ್ನಾಟಕ ಬಂದ್” ಗೆ ಬೆಂಬಲಿಸುವ ಸಲುವಾಗಿ ಇಂದು ಪುತ್ತೂರಿನಲ್ಲಿ ಸಮಾನ ಮನಸ್ಕ ಪಕ್ಷಗಳು ಮತ್ತು ಸಂಘಟನೆಗಳ ಜಂಟಿ ಪತ್ರಿಕಾ ಗೋಷ್ಠಿ

ಪುತ್ತೂರು:ಸೆಪ್ಟೆಂಬರ್ 26,  ಕೇಂದ್ರ ಸರಕಾರವು ವಿರೋಧ ಪಕ್ಷಗಳನ್ನಾಗಲಿ ರೈತರ ಕೂಗನ್ನಾಗಲಿ ಗಣನೆಗೆ ತೆಗೆದುಕೊಳ್ಳದೆ ಆತುರಾತುರವಾಗಿ ಉಭಯ ಸದನಗಳಲ್ಲಿ ಭೂ ಸುಧಾರಣೆ,ಎಪಿಎಂಸಿ ತಿದ್ದುಪಡಿ, ಮುಂತಾದ ರೈತವಿರೋಧಿ ಮಸೂದೆಗಳನ್ನು ಜಾರಿಮಾಡಿರುವುದರ ವಿರುದ್ಧ ರೈತ ಪರ ಸಂಘಟನೆಗಳು ಮತ್ತು ರಾಜಕೀಯ ಪಕ್ಷಗಳು ಸೆಪ್ಟೆಂಬರ್ 28 ರಂದು ಈ ಮಸೂದೆಯನ್ನು ಹಿಂಪಡೆಯಬೇಕು ಮತ್ತು ರಾಷ್ಟ್ರಪತಿಗಳು ಇದನ್ನು ಅಂಗೀಕರಿಸಬಾರದು ಎಂದು ಒತ್ತಾಯಿಸಿ ಕರ್ನಾಟಕ ಬಂದ್ ನಡೆಸಲಿದೆ. ಆದ್ದರಿಂದ ಈ ಬಂದನ್ನು ಯಶಸ್ವಿಗೊಳಿಸಿ  ರೈತರನ್ನು ಬಂಡವಾಳಶಾಹಿಗಳ ಗುಲಾಮಗಿರಿಯಿಂದ ರಕ್ಷಿಸಲು ಈ ಬಂದ್ ಗೆ  ಬೆಂಬಲ ನೀಡುವುದಕ್ಕಾಗಿ ಇಂದು ಪುತ್ತೂರಿನಲ್ಲಿ ಪತ್ರಿಕಾಗೋಷ್ಠಿಯ ಮೂಲಕ ತಿಳಿಸಲಾಯಿತು. 

   ಈ ಒಂದು ಜನವಿರೋಧಿ ಮಸೂದೆಯನ್ನು ರೈತರ ಪರ ಎಂದು ಬಿಂಬಿಸಲು ಸರಕಾರವು ಹೆಣಗಾಡುತ್ತಿದೆ., ಮಾತ್ರವಲ್ಲದೆ ಅದಕ್ಕಾಗಿ ತನ್ನ (ಭಾಜಪ)ರಾಜಕೀಯ ಪಕ್ಷಗಳ ಬೆಂಬಲಿತ ಎಲ್ಲಾ ಉಪ ಸಂಘಟನೆಗಳನ್ನೂ ಉಪಯೋಗಿಸಲು ಮುಂದಾಗಿರುವುದು ಸಾರ್ವಜನಿಕರ ಗಮನಕ್ಕೆ ಬಂದ ವಿಷಯವೇ ಆಗಿದೆ.
ಇನ್ನು ಎಲ್ಲಾ ವಿರೋಧದ ನಡುವೆಯೂ ಒಂದೊಮ್ಮೆ ಇದು ಅಸಂವಿಧಾನಿಕವಾಗಿ ಜಾರಿಯಾದರೆ, ಇದರ ದೂರಗಾಮಿ ಪರಿಣಾಮ ಬಹಳ ಅಪಾಯಕಾರಿಯಾಗಿದೆ.


ಮುಂದೆ ಕೃಷಿ ಭೂಮಿಗಳ, ಒಡೆತನ (ಖಾಸಗಿ ಉದ್ದಿಮೆ ದಾರರ)  ಕಾರ್ಪೊರೇಟ್ ಗಳ ಕೈಯಲ್ಲಿ ಆಗಿಹೋದರೆ ನಮ್ಮ ದೇಶ ಸ್ವಾವಲಂಬನೆಯನ್ನೇ ಕಳೆದುಕೊಂಡು ಜನಸಾಮಾನ್ಯರು ಬೃಹತ್ ಕಂಪನಿಗಳ ಜೀತಗಾರಿಕೆಗೆ ಒಳಗಾಗಬಹುದು. ಕೃಷಿ ಭೂಮಿಯನ್ನು ದೈತ್ಯ ಕಂಪನಿಗಳು ವಶಪಡಿಸಿ ಇಲ್ಲಿ ಆಹಾರದ ಧಾನ್ಯಗಳು ಸಿಗದೆ ಇರುವ ಸನ್ನಿವೇಶ ಎದುರಾಗಬಹುದಾದ ದುರವಸ್ಥೆಯನ್ನು ಎದುರಿಸಬೇಕಾದೀತು. ಅಂದರೆ ಅಗತ್ಯ ಆಹಾರ ಧಾನ್ಯಗಳ ಕೊರತೆಯಿಂದ ವಿದೇಶದಿಂದ ಆಮದು ಮಾಡಿಕೊಳ್ಳುವ ಪರಿಸ್ಥಿತಿಯಲ್ಲಿ ನಮ್ಮ ದೇಶವು ಬಲಹೀನವಾಗಲಿದೆ. ಮತ್ತು ಅಮದಿತ  ಆಹಾರಕ್ಕಾಗಿ ಆಳುವವರ ಮೂಗಿನಡಿಯಲ್ಲಿ ಕಾರ್ಯ ನಿರ್ವಹಿಸುವ ಉದ್ದಿಮೆದಾರರ ಮುಂದೆ ಬಡಜನತೆ ಪಾತ್ರೆ ಹಿಡಿದು ಕಾಯುವ ದಯನೀಯತೆಗೆ ಕಾರಣವಾಗಲಿದೆ. ಆದ್ದರಿಂದ ಸರಕಾರವು ರೈತರ ತಾಳ್ಮೆಯನ್ನು ಪರೀಕ್ಷಿಸದೆ  ಈ ರೈತ ವಿರೋಧಿ ಮಸೂದೆಯನ್ನು ಕೂಡಲೇ ಹಿಂಪಡೆಯಬೇಕು ಎಂದು ನಾವು ಆಗ್ರಹಿಸುತ್ತೇವೆ.ಅದೇ ರೀತಿ ರೈತರ ಪರವಾಗಿ ನಡೆಯಲಿರುವ “ಕರ್ನಾಟಕ  ಬಂದ್” ಗೆ ನಾವು ಸಂಪೂರ್ಣ ಬೆಂಬಲ ಸೂಚಿಸಲಿದ್ದೇವೆ ಎಂದು ಈ ಮೂಲಕ ತಿಳಿಸುತ್ತೇವೆ.            ಪತ್ರಿಕಾ ಗೋಷ್ಠಿಯಲ್ಲಿ ಉಪಸ್ಥಿತರಿದ್ದವರು.       

       ಓಸ್ವಾಲ್ಡ್ ಪ್ರಕಾಶ್ ಫೆರ್ನಾಂಡಿಸ್. (ಜಿಲ್ಲಾಧ್ಯಕ್ಷರು ಕರ್ನಾಟಕ ರಾಜ್ಯ ರೈತ ಸಂಘ  ದಕ್ಷಿಣ ಕನ್ನಡ )            ಸುಲೈಮಾನ್ ಕಲ್ಲರ್ಪೆ. (ಜಿಲ್ಲಾಧ್ಯಕ್ಷರು ವೆಲ್ಫೇರ್ ಪಾರ್ಟಿ ಆಫ್ ಇಂಡಿಯಾ ದಕ್ಷಿಣ ಕನ್ನಡ )                   ಅಡ್ವಕೇಟ್ ತುಳಸೀದಾಸ್ (ಸಿಪಿಎಂ ಸದಸ್ಯರು.ಮತ್ತು ಡಿವೈಎಫ್ಐ  ಕಾರ್ಯದರ್ಶಿ)                 ರಾಜು ಹೊಸಮಠ. (ಅಂಬೇಡ್ಕರ್ ಆಪತ್ಬಾಂಧವ ಟ್ರಸ್ಟ್ ಸ್ಥಾಪಕ ಜಿಲ್ಲಾಧ್ಯಕ್ಷರು )           ಇಸ್ಹಾಕ್ ನೀರ್ಕಜೆ ವಿಟ್ಲ (FITU ದಕ ಜಿಲ್ಲಾ ಸಮಿತಿ ಸದಸ್ಯರು)                        ಇಕ್ಬಾಲ್ ಹಳೆಮನೆ (dyfi ಜಿಲ್ಲಾ ಸಮಿತಿ ಸದಸ್ಯರು)     ಗಿರಿದರ್ ನಾಯಿಕ್ (ಅಂಬೇಡ್ಕರ್ ಸಮಿತಿ ದಕ ಜಿಲ್ಲೆ)                             ಪರಮೇಶ್ವರ್ ಕೆಮ್ಮಿಂಜೆ,&     ಹೇಮಂತ್ ಆರ್ಲಪದವು (ಡಿಎಸ್ಎಸ್ )

Share this on:
error: Content is protected !!