Latest Posts

ಬ್ಲಡ್ ಹೆಲ್ಪ್ ಲೈನ್ ಕರ್ನಾಟಕ(ರಿ) ಹಾಗೂ ಜಿ.ಸಿ.ಸಿ.ಅಮ್ಮುಂಜೆ ಜಂಟಿ ಆಶ್ರಯದಲ್ಲಿ ಯಶಸ್ವಿ ರಕ್ತದಾನ ಶಿಬಿರ.

ಅಮ್ಮುಂಜೆ,ಮಂಗಳೂರು: ಬ್ಲಡ್ ಹೆಲ್ಪ್ ಲೈನ್ ಕರ್ನಾಟಕ (ರಿ) ಸಂಸ್ಥೆ ಹಾಗೂ ಜಿ.ಸಿ.ಸಿ ಹೆಲ್ಪ್ ಲೈನ್ ಅಮ್ಮುಂಜೆ ಜಂಟಿ ಆಶ್ರಯದಲ್ಲಿ ಯೆನೆಪೋಯ ಆಸ್ಪತ್ರೆ ದೇರಳಕಟ್ಟೆ ಸಹಭಾಗಿತ್ವದಲ್ಲಿ ಸಾರ್ವಜನಿಕ ರಕ್ತದಾನ ಶಿಬಿರ ಹಾಗೂ ಕೊರೋನ ಯೋಧರಿಗೆ ಸನ್ಮಾನ ಕಾರ್ಯಕ್ರಮ ಅಮ್ಮುಂಜೆ ಖಾಸಗಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ರವಿವಾರ ಯಶಸ್ವಿಯಾಗಿ ನಡೆಯಿತು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಜಿ.ಸಿ.ಸಿ ಹೆಲ್ಪ್ ಲೈನ್ ಅಮ್ಮುಂಜೆ ಮರ್ಕಝ್ ನಗರ ಇದರ ಮುಖಂಡ ಅಬ್ದುಲ್ ಮಜೀದ್ ಕೆ. ವಹಿಸಿದ್ದರು. ಅಮ್ಮುಂಜೆ ಜುಮಾ ಮಸೀದಿ ಅಧ್ಯಕ್ಷ ಅಬೂಬಕ್ಕರ್ ಕೆ.ಎಂ ಹಾಗೂ ಜಿ.ಸಿ.ಸಿ ಹೆಲ್ಪ್ ಲೈನ್ ಅಮ್ಮುಂಜೆ ಇದರ ಸಲಹೆಗಾರ ಬಹು: ಮುಹಿಯುದ್ದೀನ್ ಸಅದಿ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡಿದ್ದರು.

ಕಾರ್ಯಕ್ರಮದಲ್ಲಿ ಮನಪಾ ಆರೋಗ್ಯ ಅಧಿಕಾರಿ ಡಾ.ಮಂಜಯ್ಯ ಶೆಟ್ಟಿ, ಮನಪಾ ಇಂಜಿನಿಯರ್ ಅಬ್ದುಲ್ ಖಾದರ್, ಡಾ.ಇ.ಕೆ.ಇ ಸಿದ್ದೀಕ್ ಅಡ್ಡೂರು, ಆಶಾ ಕಾರ್ಯಕರ್ತೆಯರಾದ ನಳಿನಿ ಸುರೇಶ್ ಜೋಗಿ ಹಾಗೂ ಉಮಾವತಿ ವಿಶ್ವನಾಥ್ ಜೋಗಿ ಅವರನ್ನು ಸನ್ಮಾನಿಸಲಾಯಿತು.

ರಕ್ತದಾನ ಶಿಬಿರದಲ್ಲಿ ಒಟ್ಟು 57 ಯುನಿಟ್ ರಕ್ತ ಸಂಗ್ರಹಿಸಲಾಯಿತು.ದಾನಿಗಳಿಂದ ರಕ್ತ ಸಂಗ್ರಹಿಸುವಲ್ಲಿ ಯೆನೆಪೋಯ ಆಸ್ಪತ್ರೆಯ ವೈದ್ಯಾಧಿಕಾರಿಗಳು ಹಾಗೂ ಸಿಬ್ಬಂದಿ ವರ್ಗದವರು ಸಹಕರಿಸಿದರು.

ಜಿ.ಸಿ.ಸಿ ಹೆಲ್ಪ್ ಲೈನ್ ಅಮ್ಮುಂಜೆ ಸದಸ್ಯರಾದ ಸಿದ್ದೀಕ್ ಬಾಕಿಮಾರ್ ಸ್ವಾಗತಿಸಿ, ಅಬ್ದುಲ್ ಹಕೀಮ್ ಧನ್ಯವಾದ ಸಮರ್ಪಿಸಿ ಅಶ್ಫಕ್ ಎ.ಎಚ್ ಕಾರ್ಯಕ್ರಮ ನಿರೂಪಿಸಿದರು.

ರಕ್ತದಾನ ಮಾಡಿದ ಸರ್ವ ಸಹೃದಯೀ ದಾನಿಗಳಿಗೂ,ಆಸ್ಪತ್ರೆ ಸಿಬ್ಬಂದಿ ವರ್ಗಕ್ಕೂ ಪ್ರತ್ಯಕ್ಷ ಹಾಗೂ ಪರೋಕ್ಷವಾಗಿ ಸಹಕರಿಸಿದ ಅಮ್ಮುಂಜೆಯ ಜನಸ್ನೇಹಿ ನಾಗರಿಕರಿಗೂ ಹಾಗೂ ಕಾರ್ಯಕ್ರಮದ ಯಶಸ್ವಿಗಾಗಿ ಹಗಳಿರುಲು ದುಡಿದ ಎಲ್ಲಾ ಕಾರ್ಯಕರ್ತರಿಗೂ,ಮಾಧ್ಯಮ ಪ್ರತಿನಿಧಿಗಳಿಗೂ ಸಂಘಟಕರು ಕೃತಜ್ಞತೆಯನ್ನು ತಿಳಿಸಿದ್ದಾರೆ ಎಂದು ಬ್ಲಡ್ ಹೆಲ್ಪ್ ಲೈನ್ ಕರ್ನಾಟಕ (ರಿ) ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Share this on:
error: Content is protected !!