Latest Posts

ಕೃಷ್ಣ ನದಿಯಲ್ಲಿ ತೇಲಿ ಬಂತು ಚಿನ್ನ ಹೊತ್ತ ಮೃತ ದೇಹ

ಬೆಳಗಾವಿ: ಬೆಳಗಾವಿ ಜಿಲ್ಲೆಯ ಕೃಷ್ಣ ನದಿಯಲ್ಲಿ ತೇಲಿ ಬಂದ ಮೃತದೇಹದಲ್ಲಿ ಒಂದುವರೆ ಕಿಲೋಗ್ರಾಂ ತೂಕದ ಚಿನ್ನವನ್ನು ಕಟ್ಟಿ ಹಾಕಿತ್ತು, ಇದರ ಅಂದಾಜು ಬೆಲೆ 69 ಲಕ್ಷ ಆಗಿರಬಹುದು.

ಆ ಮೃತದೇಹವು ಮಹಾರಾಷ್ಟ್ರದಲ್ಲಿನ ಸಾಂಗ್ಲಿ ಗ್ರಾಮದ ಸಾಗರ್ ಪಾಟ್ಟಿ (30) ಎಂಬುವರದ್ದಾಗಿದೆ ಎಂದು ಪೋಲಿಸರು ತಿಳಿಸಿದ್ದಾರೆ.

ಶವದ ಮೇಲೆ ಗಾಯದ ಗುರುತುಗಳಿದ್ದು ಸಾಗರ ಪಾಟೀಲ ಮೃತಪಟ್ಟಿದ್ದು ಹೇಗೆ? ಎಂದು ತನಿಖೆ ನಡೆಯುತ್ತಿದೆ. ಶವದ ಜೊತೆ ಚಿನ್ನ ಸಿಕ್ಕಿರುವುದು ಕಂಡು ಪೊಲೀಸರು ಸಹ ಅಚ್ಚರಿಗೊಂಡಿದ್ದಾರೆ.

ಅಥಣಿ ಪೊಲೀಸರು ಕಾನೂನು ಪ್ರಕ್ರಿಯೆಗಳನ್ನು ಪೂರ್ಣಗೊಳಿಸಿ ಕುಟುಂಬದವರಿಗೆ ಶವವನ್ನು ಹಸ್ತಾಂತರ ಮಾಡಿದರು. ಇದು ಕೊಲೆಯೇ?, ಆತ್ಮಹತ್ಯೆಯೇ? ಎಂಬ ಬಗ್ಗೆ ತನಿಖೆ ನಡೆಯುತ್ತಿದೆ.

Share this on:
error: Content is protected !!