SKSSF ಕರ್ನಾಟಕ ಯುಎಇ ಸಮಿತಿಯ ಸಹಭಾಗಿತ್ವದಲ್ಲಿ SKSSF ವಿಖಾಯ ಕರ್ನಾಟಕ ಯುಎಇ ಸಮಿತಿಯ ವತಿಯಿಂದ ಬೃಹತ್ ರಕ್ತ ದಾನ ಶಿಬಿರ ಇದೇ ಬರುವ ದಿನಾಂಕ 16.10.2020 ಶುಕ್ರವಾರ ಸಮಯ ಮದ್ಯಾಹ್ನ 2ರಿಂದ 5ಗಂಟೆ ತನಕ ದುಬೈ ಲತೀಫ ಆಸ್ಪತ್ರೆ, ರಕ್ತ ದಾನ ಕೇಂದ್ರದಲ್ಲಿ ನಡೆಯಲಿದೆ.
ಸಯ್ಯದ್ ಅಸ್ಗರ್ ಅಲೀ ತಂಙಲ್ ಅವರು ಉದ್ಘಾಟಿಸುವ ಈ ಶಿಬಿರದಲ್ಲಿ ಯುಎಇಯಲ್ಲಿರುವ ಎಲ್ಲಾ ಸಮಸ್ತ ಅಭಿಮಾನಿಗಳು, ಸಾಮಾಜಿಕ ಸಹೃದಯರು ರಕ್ತ ದಾನ ಎಂಬ ಮಹಾ ದಾನವನ್ನು ಮಾಡಿ ಈ ಸಮಾಜಮುಖಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸುವುದರ ಮೂಲಕ ತಮ್ಮ ತಮ್ಮ ಶಾರೀರಿಕ,ಮಾನಸಿಕ ಆರೋಗ್ಯವನ್ನು ಉತ್ತಮಗೊಳಿಸುವ ಈ ಅವಕಾಶವನ್ನು ಸದುಪಯೋಗ ಪಡಿಸಿಕೊಳ್ಳಬೇಕು. ರಕ್ತ ದಾನ ಮಹಾ ದಾನವಾಗಿರುತ್ತದೆ, ಕೋವಿಡ್ ಕಾಲದಲ್ಲಿ ಇದರ ಅವಶ್ಯಕತೆ ಹೆಚ್ಚುತ್ತಿದೆ, ರಕ್ತ ದಾನ ಶಿಬಿರದಲ್ಲಿ ಭಾಗವಹಿಸುವವರಿಗೆ ದುಬೈ ಮತ್ತು ಶಾರ್ಜಾ ದ ಆಯ್ದ ಸ್ಥಳಗಳಿಂದ ಸಾರಿಗೆ ವ್ಯವಸ್ಥೆ ಏರ್ಪಡಿಸಲಾಗುವುದು ಎಂದು SKSSF ವಿಖಾಯ ಕರ್ನಾಟಕ ಯುಎಇ ಸಮಿತಿಯ ಚಯರ್ ಮೇನ್ ಜನಾಬ್ ನವಾಝ್ ಬಿಸಿ ರೋಡ್ ಅವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.
ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ 0565812108, 0556078894, 0582698039