ಬಂಟ್ವಾಳ: ಗೂಡಿನಬಳಿ ವಲಯದ ನೂತನ ಕಾಂಗ್ರೆಸ್ ಕಛೇರಿ ಉದ್ಘಾಟನಾ ಸಮಾರಂಭವು ಜಬಲುನ್ನೂರ್ ಕಾಂಪ್ಲೆಕ್ಸ್ ನಲ್ಲಿ ಬಹಳ ವಿಜ್ರಂಭಣೆಯಿಂದ ಜರುಗಿತು. ಕಛೇರಿಯನ್ನು ಉದ್ಘಾಟಿಸಿ ಮಾತನಾಡಿದ ಮಾಜಿ ಸಚಿವರಾದ ಶ್ರೀ ಬಿ ರಮಾನಾಥ ರೈಯವರು ತನ್ನ ಅಧಿಕಾರವಧಿಯಲ್ಲಿ ಗೂಡಿನಬಳಿಗೆ ಕೊಟ್ಟ ಅನೇಕ ಅಭಿವೃದ್ಧಿ ಯೋಜನೆಗಳನ್ನು ಮೆಲುಕು ಹಾಕಿದರು. ಇತ್ತೀಚೆಗೆ ತೀರಿಹೋದ ಸ್ಥಳೀಯ ಹಿರಿಯ ಕಾಂಗ್ರೆಸ್ ಮುಖಂಡರಾದ ಮರ್ಹೂಂ ಜಿಕೆ ಅಹ್ಮದ್ ಬಾವ, ಟಿ.ಮಹಮ್ಮದ್ ಹಾಗೂ ಲತೀಫ್ ಖಾನ್ ಇವರ ಕೊಡುಗೆಯನ್ನು ಸ್ಮರಿಸಿದರು.
ವೇದಿಕೆಯಲ್ಲಿ ಎಂ ಎಸ್ ಮೊಹಮ್ಮದ್, ಬೇಬಿ ಕುಂದರ್, ಸುದೀಪ್, ಮೊಹಮ್ಮದ್ ನಂದಾವರ, ಲುಕ್ಮಾನ್ ಬಿಸಿ ರೋಡ್, ಸುಹೈಲ್ ಕಂದಕ್ ಉಪಸ್ಥಿತರಿದ್ದರು.
ಇಸ್ರಾರ್ ಗೂಡಿನಬಳಿ ಸ್ವಾಗತಿಸಿದರು.
ಇದೇ ಸಂದರ್ಭದಲ್ಲಿ ಜಿಲ್ಲಾ ಪಂಚಾಯತ್ ಸದಸ್ಯ ಚಂದ್ರಪ್ರಕಾಶ್ ಶೆಟ್ಟಿ,ತಾಲೂಕು ಪಂಚಾಯತ್ ಉಪಾಧ್ಯಕ್ಷ ಅಬ್ಬಾಸ್ ಅಲಿ ತದನಂತರ ಕಛೇರಿಗೆ ಭೇಟಿ ನೀಡಿ ಶುಭಹಾರೈಸಿದರು.
ಪರ್ವೇಝ್ ಜಿಕೆ ಗೂಡಿನಬಳಿ ಅವರನ್ನು ಸ್ವಾಗತಿಸಿದರು.
ಈ ಸಂದರ್ಭ ಸ್ಥಳೀಯ ಮುಖಂಡರು ಹಾಗೂ ಕಾರ್ಯಕರ್ತರು, ಪಕ್ಷದ ಹಿತೈಷಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದರು.
