Latest Posts

ಆನ್‌ಲೈನ್‌ ಗೇಮ್ಸ್ ಬೆಟ್ಟಿಂಗ್: ನಿಷೇಧಕ್ಕೆ ಸರ್ಕಾರ ಚಿಂಚನೆ

ಹೊಸ ಕಾನೂನಿನ ಮೂಲಕ ಯುವ ಜನರ ರಕ್ಷಣೆಗೆ : ಸಚಿವ ಬೊಮ್ಮಾಯಿ

ಬೆಂಗಳೂರು: ರಾಜ್ಯದಲ್ಲಿ ನಡೆಯುತ್ತಿರುವ ಆನ್‌ಲೈನ್‌ ಗೇಮ್‌ ಹಾವಳಿ ತಡೆಗಟ್ಟಲು ಕ್ರಮ ಕೈಗೊಳ್ಳಲು ರಾಜ್ಯ ಸರಕಾರ ಕೊನೆಗೂ ಮುಂದಾಗಿದೆ. ಆನ್‌ಲೈನ್‌ ಗೇಮ್‌ ನಿಯಂತ್ರಣದ ಬಗ್ಗೆ ಸಾರ್ವಜನಿಕ ವಲಯದಿಂದ ವ್ಯಕ್ತವಾಗುತ್ತಿರುವ ಆಕ್ಷೇಪದ ಹಿನ್ನೆಲೆಯಲ್ಲಿ ಸರಕಾರ ಈ ನಿರ್ಧಾರಕ್ಕೆ ಬಂದಿದೆ.

ಗೃಹ ಸಚಿವ ಬಸವರಾಜ ಬೊಮ್ಮಾಯಿ ಶುಕ್ರವಾರ ಸುದ್ದಿಗಾರರಿಗೆ ಈ ಬಗ್ಗೆ ಮಾಹಿತಿ ನೀಡಿದ್ದು, ”ಆನ್‌ಲೈನ್‌ ಗೇಮ್‌ ನಿಷೇಧಿಸುವುದಕ್ಕಾಗಿ ಹೊಸ ಕಾನೂನು ಜಾರಿಗೊಳಿಸಲಾಗುವುದು” ಎಂದು ಹೇಳಿದ್ದಾರೆ. ನೆರೆ ರಾಜ್ಯಗಳಲ್ಲಿ ಈಗಾಗಲೇ ಇಂತಹ ಕಾನೂನು ಜಾರಿಗೊಳಿಸಿರುವುದರಿಂದ ರಾಜ್ಯ ಸರಕಾರದ ಮೇಲೂ ಈ ಸಂಬಂಧ ಕ್ರಮಕ್ಕೆ ಒತ್ತಡ ಹೆಚ್ಚಿದೆ. ”ಬೇರೆ ರಾಜ್ಯಗಳಲ್ಲಿ ಯಾವ ರೀತಿಯ ಕಾನೂನು ಇದೆ ಎಂಬ ಬಗ್ಗೆ ಅಧ್ಯಯನ ಮಾಡಲಾಗುತ್ತಿದೆ. ಈ ಜಾಲಕ್ಕೆ ಯುವಕರು ಬಲಿಯಾಗುತ್ತಿರುವ ಬಗ್ಗೆ ವ್ಯಾಪಕ ದೂರುಗಳು ಬರುತ್ತಿವೆ. ಪೋಷಕರು, ಸಾರ್ವಜನಿಕ ವಲಯದಿಂದಲೂ ದೂರು ಬರುತ್ತಿವೆ. ಹಾಗಾಗಿ ಇದನ್ನು ಗಂಭೀರವಾಗಿ ಪರಿಗಣಿಸಿದ್ದೇವೆ. ಈಗಾಗಲೇ ಅಧಿಕಾರಿಗಳ ಜೊತೆ ಸಭೆ ನಡೆಸಿದ್ದೇನೆ. ಸರಕಾರದಿಂದ ಅನುಮತಿ ಪಡೆದಿದ್ದರೆ ಸಮಸ್ಯೆ ಇಲ್ಲ. ಕಾನೂನುಬಾಹಿರವಾಗಿ ಯಾವುದೇ ಆನ್‌ಲೈನ್‌ ಗೇಮ್‌ ನಡೆಯುತ್ತಿದ್ದರೂ ಕ್ರಮ ನಿಶ್ಚಿತ,” ಎಂದು ಎಚ್ಚರಿಕೆ ನೀಡಿದ್ದಾರೆ.

ಆಂಧ್ರ ಪ್ರದೇಶ ಸರಕಾರ ಈಗಾಗಲೇ ಆನ್‌ಲೈನ್‌ ಗೇಮ್‌, ಆನ್‌ಲೈನ್‌ ಬೆಟ್ಟಿಂಗ್‌, ಆನ್‌ಲೈನ್‌ ಜೂಜನ್ನು ನಿಷೇಧಿಸಿದೆ. ಇದಕ್ಕಾಗಿ ಆಂಧ್ರ ಪ್ರದೇಶ ಗೇಮಿಂಗ್‌ ಕಾಯಿದೆ 1974ಕ್ಕೆ ತಿದ್ದುಪಡಿ ತಂದು ಸರಕಾರ ಸುಗ್ರೀವಾಜ್ಞೆಯನ್ನೇ ಹೊರಡಿಸಿದೆ.

Share this on:
error: Content is protected !!