ಐಎಂಎ ಹೂಡಿಕೆದಾರರಿಗೆ ಸಾವಿರಾರು ಕೋಟಿ ರೂಪಾಯಿ ವಂಚನೆ ಮಾಡಿದ ಪ್ರಕರಣದಲ್ಲಿ ಬೆಂಗಳೂರಿನ ಶಿವಾಜಿನಗರ ಕ್ಷೇತ್ರದ ಮಾಜಿ ಶಾಸಕ ರೋಷನ್ ಬೇಗ್ ಅವರನ್ನ ಸಿಬಿಐ ಅರೆಸ್ಟ್ ಮಾಡಿದೆ. ಭಾನುವಾರ ಬೆಳಗ್ಗೆಯೇ ಅವರನ್ನ ವಶಕ್ಕೆ ಪಡೆದು ವಿಚಾರಣೆ ನಡೆಸಿದ ಸಿಬಿಐ ಅಧಿಕಾರಿಗಳು ರಾತ್ರಿ 8 ಗಂಟೆ ಸುಮಾರಿಗೆ ಅರೆಸ್ಟ್ ಮಾಡಿದರು ಬಳಿಕ ಅವರನ್ನ ಸಿಬಿಐ ವಿಶೇಷ ಕೋರ್ಟ್ ಮುಂದೆ ಹಾಜರುಪಡಿಸಲಾಯ್ತು. ಈ ವೇಳೆ ಕೋರ್ಟ್ ರೋಷನ್ ಬೇಗ್ಗೆ 14 ದಿನಗಳ ನ್ಯಾಯಾಂಗ ಬಂಧನ ವಿಧಿಸಿ ಆದೇಶ ನೀಡಲಾಗಿದೆ
ಪ್ರಕರಣದ ಪ್ರಮುಖ ಆರೋಪಿಯಾಗಿರುವ ಮನ್ಸೂರ್ ಖಾನ್ ಈ ಹಿಂದೆ ಬಿಡುಗಡೆ ಮಾಡಿದ್ದ ವಿಡಿಯೋದಲ್ಲಿ ರೋಷನ್ ಬೇಗ್ಗೆ 400 ಕೋಟಿ ರೂಪಾಯಿ ಹಣ ಕೊಟ್ಟಿದ್ದೆ, ಅದನ್ನ ಬಳಸಿಕೊಂಡು ಅವರು ಚುನಾವಣೆ ಗೆದ್ದಿದ್ದರು ಅಂತ ಆರೋಪಿಸಿದ್ದ. ಅದೇ ಈಗ ಆ ವೀಡಿಯೋ ರೋಷನ್ ಬೇಗ್ಗೆ ಮುಳುವಾದಂತೆ ಕಾಣ್ತಿದೆ.
ಐಎಂಎ ವಂಚನೆ ಪ್ರಕರಣ ರೋಷನ್ ಬೇಗ್ ಅರೆಸ್ಟ್
