ಕೆಪಿಸಿಸಿ ಅಲ್ಪಸಂಖ್ಯಾತ ವಿಭಾಗದ ನೂತನ ರಾಜ್ಯ ಸಂಚಾಲಕರಾಗಿ ಮುಸ್ತಫಾ ಅಬ್ದುಲ್ಲಾ ಉಳ್ಳಾಲ ಆಯ್ಕೆ

ಬೆಂಗಳೂರು: ಕರ್ನಾಟಕ ರಾಜ್ಯ ಪ್ರದೇಶ ಕಾಂಗ್ರೆಸ್ ಸಮಿತಿಯ ಅಲ್ಪಸಂಖ್ಯಾತ ವಿಭಾಗದ ನೂತನ ರಾಜ್ಯ ಸಂಚಾಲಕರಾಗಿ ಸಮಾಜಸೇವಕ ಮುಸ್ತಫಾ ಅಬ್ದುಲ್ಲಾ ಉಳ್ಳಾಲ ಅವರು ಆಯ್ಕೆಯಾಗಿದ್ದಾರೆ.

ಈ ಆಯ್ಕೆ ಪ್ರಕ್ರಿಯೆಯು ಕೆಪಿಸಿಸಿ ಅಲ್ಪಸಂಖ್ಯಾತ ವಿಭಾಗದ ಅಧ್ಯಕ್ಷ ವೈ ಸಯೀದ್ ಅಹ್ಮದ್ ಅವರ ಶಿಫಾರಸಿನ ಮೇಲೆ ಎಐಸಿಸಿ ಅಲ್ಪಸಂಖ್ಯಾತ ವಿಭಾಗದ ಅಧ್ಯಕ್ಷ ನದೀಂ ಜಾವೆದ್ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಅನುಮೋದಿಸಿರುತ್ತಾರೆ.

ಪತ್ರಿಕೆಯೊಂದಿಗೆ ಮಾತನಾಡಿದ ಮುಸ್ತಫಾ ಅಬ್ದುಲ್ಲರು ತನಗೆ ಅವಕಾಶ ಮಾಡಿ‌ಕೊಟ್ಟ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್, ಶಾಸಕ ಯುಟಿ ಖಾದರ್, ರಾಮಲಿಂಗಾರೆಡ್ಡಿ, ಈಶ್ವರ ಖಂಡ್ರೆ, ಸಲೀಂ‌ಅಹ್ಮದ್, ಸತೀಶ್ ಜಾರಕಿಹೊಳಿ, ಧ್ರುವನಾರಾಯಣ್ ಮತ್ತು ಎಐಸಿಸಿ ಅಧ್ಯಕ್ಷೆ ಸೋನಿಯಾ ಗಾಂಧಿ ಇವರಿಗೆ ಧನ್ಯವಾದ ಸಲ್ಲಿಸಿದ್ದಾರೆ.
ಹಾಗೂ ರಾಜ್ಯಾದ್ಯಂತ ವಿವಿಧ ಯೋಜನೆಗಳೊಂದಿಗೆ ಪಕ್ಷ ಸಂಘಟಿಸಲು ಶಕ್ತಿ ಮೀರಿ ಶ್ರಮಿಸುವೆನು ಎಂದರು.

Share this on:
error: Content is protected !!