Latest Posts

ಕ್ಯಾಂಪಸ್ ಫ್ರಂಟ್ ಆಫ್ ಇಂಡಿಯಾದ ನೂತನ ರಾಜ್ಯಾಧ್ಯಕ್ಷರಾಗಿ ಅಥಾವುಲ್ಲಾ ಪುಂಜಾಲ್‌ಕಟ್ಟೆ ಆಯ್ಕೆ

ಬಳ್ಳಾರಿ: ಕ್ಯಾಂಪಸ್ ಫ್ರಂಟ್ ಆಫ್ ಇಂಡಿಯಾ ಕರ್ನಾಟಕ ರಾಜ್ಯ ಪ್ರತಿನಿಧಿ ಸಭೆಯು ಬಳ್ಳಾರಿ ಜಿಲ್ಲೆಯ ಹೊಸ ಪೇಟೆಯಲ್ಲಿ ನಡೆಯಿತು. ಫ್ಯಾಸಿಸಂ ಕಬಂಧ ಬಾಹುಗಳಿಂದ ನ್ಯಾಯವನ್ನು ಸ್ವತಂತ್ರಗೊಳಿಸೋಣ ಎಂಬ ಘೋಷಣೆಯೊಂದಿಗೆ ನೆಡದ ಸಮಾವೇಶದಲ್ಲಿ ರಾಜ್ಯಾಧ್ಯಕ್ಷ ಫಯಾಝ್ ದೊಡ್ಡಮನೆ ಅಧ್ಯಕ್ಷತೆ ವಹಿಸಿ ಧ್ವಜಾರೋಹಣ ನೆರೆವೇರಿಸಿದರು.

ಪ್ರತಿನಿಧಿ ಸಭೆಯ ಉದ್ಘಾಟನೆಯನ್ನು ರಾಷ್ಟ್ರೀಯ ಕಾರ್ಯದರ್ಶಿ ಕಲೀಮ್ ತುಮಕೂರು ಮಾಡಿದರು. ವಾರ್ಷಿಕ ವರದಿಯನ್ನು ರಾಜ್ಯ ಪ್ರಧಾನ ಕಾರ್ಯದರ್ಶಿ ಸ್ವದಕತ್ ಷಾ ವಾಚಿಸಿದರು‌.ರಾಜ್ಯದ ವಿವಿಧ ಜಿಲ್ಲೆಗಳ ಪ್ರತಿನಿಧಿಗಳು ಭಾಗವಹಿಸಿ ಶೈಕ್ಷಣಿಕ, ಸಾಮಾಜಿಕ ಮತ್ತು ರಾಜಕೀಯ ವಿಷಯಗಳ ಬಗ್ಗೆ ಚರ್ಚಿಸಲಾಯಿತು.

ಈ ಸಂಧರ್ಭದಲ್ಲಿ ಸಂಘಟನೆಯ ನೂತನ ಸಾಲಿನ ಪದಾಧಿಕಾರಿಗಳ ಆಯ್ಕೆ ಮಾಡಲಾಯಿತು. ಚುನಾವಣಾ ಪ್ರಕ್ರಿಯೆಯನ್ನು ರಾಷ್ಟ್ರೀಯ ಸಮಿತಿ ಸದಸ್ಯ ಪಿ ವಿ ಶುಹೈಬ್ ಮಾಡಿದರು. ಸಭೆಯಲ್ಲಿ ನಿರ್ಣಯಗಳನ್ನು ತೆಗೆಯಲಾಯಿತು.

ನೂತನ ರಾಜ್ಯ ಪದಾಧಿಕಾರಿಗಳು

ರಾಜ್ಯಾಧ್ಯಕ್ಷ – ಅಥಾವುಲ್ಲಾ ಪುಂಜಲ್ಕಟ್ಟೆ

ಪ್ರಧಾನ ಕಾರ್ಯದರ್ಶಿ – ಅನೀಸ್ ಪುತ್ತೂರು

ಉಪಾಧ್ಯಕ್ಷರು – ಸ್ವದಕತ್ ಷಾ ಮತ್ತು ಶೈಮಾ ಷರೀಫ್

ಕಾರ್ಯದರ್ಶಿ- ಅಲ್ತಾಫ್ ಹೊಸಪೇಟೆ, ಸರ್ಫರಾಝ್ ಗಂಗಾವತಿ, ಮಿಸ್ರಿಯಾ

ಕೋಶಾಧಿಕಾರಿ – ಸವಾದ್ ಕಲ್ಲರ್ಪೆ

ಸಮತಿ ಸದಸ್ಯರು
ಮುಹಮ್ಮದ್ ಸಾದಿಕ್
ಬಾಷಾ ಕೊಪ್ಪಳ
ರೋಷನ್ ನವಾಝ್
ಆಯೆಷಾ ಮುರ್ಶಿದಾ
ಝುಬೈರ್ ಬೆಂಗಳೂರು
ಫಹಾದ್ ಅನ್ವರ್
ಫಾತಿಮಾ ಉಸ್ಮಾನ್

Share this on:
error: Content is protected !!