Latest Posts

ಬಿಜೆಪಿ ಮುಕ್ತದತ್ತ ವಿಜಯಪುರದ ಬಬಲೇಶ್ವರ‌.

ಮಾಜಿ ಸಚಿವ ಎಂ.ಬಿ.ಪಾಟೀಲ್ ನೇತೃತ್ವದಲ್ಲಿ ಸಾಮೂಹಿಕವಾಗಿ ಕಾಂಗ್ರೆಸ್ ಸೇರ್ಪಡೆಗೊಂಡ ನೂರಾರು ಬಿಜೆಪಿ ಕಾರ್ಯಕರ್ತರು ಮತ್ತು ಮಾಜಿ ಸೈನಿಕರು.

ವಿಜಯಪುರ: ದೇಶ ಭಕ್ತರ ಗುತ್ತಿಗೆ ಹಿಡಿದಿರುವ ಬಿಜೆಪಿ ಪಕ್ಷದ ಬಣ್ಣ ಬಯಲಾಗಿದ್ದು, ಆ ಪಕ್ಷವನ್ನು ತೊರೆದು ಹಲವಾರು ಮಾಜಿ ಸೈನಿಕರು ಇಂದು ಈ ಗ್ರಾಮದಲ್ಲಿ ಕಾಂಗ್ರೆಸ್ ಪಕ್ಷವನ್ನು ಸೇರಿರುವುದೇ ಇದಕ್ಕೆ ಸಾಕ್ಷಿ ಎಂದು ಮಾಜಿ ಸಚಿವ, ಶಾಸಕ ಎಂ.ಬಿ.ಪಾಟೀಲ್ ಹೇಳಿದರು. ವಿಜಯಪುರ ಜಿಲ್ಲೆಯ ತಿಕೋಟಾ ತಾಲೂಕಿನ ದಾಶ್ಯಾಳ ಗ್ರಾಮದಲ್ಲಿ ಬಿಜೆಪಿ ಪಕ್ಷವನ್ನು ತೊರೆದು ಕಾಂಗ್ರೆಸ್ ಪಕ್ಷ ಸೇರ್ಪಡೆಗೊಂಡ ನೂರಾರು ಕಾರ್ಯಕರ್ತರನ್ನು ರವಿವಾರ ಗ್ರಾಮದಲ್ಲಿ ನಡೆದ ಕಾರ್ಯಕ್ರಮದಲ್ಲಿ ಸ್ವಾಗತಿಸಿ, ಮಾತನಾಡಿದ ಅವರು ಬಿಜೆಪಿ ಪಕ್ಷದ ಕುರಿತು ಆಶಾವಾದ ಹೊಂದಿದ್ದ ಬಹುತೇಕರಿಗೆ ಇಂದು ಭ್ರಮನಿರಶನವಾಗಿದೆ. ದೊಡ್ಡ ಸಂಖ್ಯೆಯಲ್ಲಿ ಬಿಜೆಪಿ ಪಕ್ಷವನ್ನು ತೊರೆದು ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆ ಗೊಳ್ಳುತ್ತಿರು ವದು ಬಬಲೇಶ್ವರ ಕ್ಷೇತ್ರದಿಂದಲೇ ಆರಂಭ ಗೊಂಡಿದೆ. ಇಲ್ಲಿನ ಪ್ರತಿ ಹಳ್ಳಿ-ಹಳ್ಳಿಯಿಂದ ನಿಷ್ಠಾವಂತ ಕ್ರಿಯಾಶೀಲ ಬಿಜೆಪಿ ಕಾರ್ಯಕರ್ತರು ಬಿಜೆಪಿ ಪಕ್ಷ ತೊರೆದು ನಮ್ಮ ಪಕ್ಷವನ್ನು ಸೇರುತ್ತಿದ್ದಾರೆ. ಅವರನ್ನು ಗೌರವದಿಂದ ಬರಮಾಡಿ ಕೊಳ್ಳುತ್ತೇವೆ. ಅವರಿಗೆ ಸೂಕ್ತ ಸಂದರ್ಭದಲ್ಲಿ ಸೂಕ್ತ ಸ್ಥಾನಮಾನ ನೀಡುತ್ತೇವೆ ಎಂದು ಎಂ.ಬಿ.ಪಾಟೀಲ್ ಹೇಳಿದರು. ಪ್ರತಿ ಗ್ರಾಮಗಳಲ್ಲಿ ಪ್ರತಿ ವರ್ಷ ಬೆಸಿಗೆಯಲ್ಲಿ ತಮ್ಮ ದ್ರಾಕ್ಷಿ ಬೆಳೆಗಳನ್ನು ಉಳಿಸಿಕೊಳ್ಳಲು ಪ್ರತಿಯೊಂದು ಗ್ರಾಮದಲ್ಲಿ 10ಕೋಟಿ ರೂ. ಟ್ಯಾಂಕರ್‍ಗೆ ಖರ್ಚು ಮಾಡುತ್ತಿದ್ದರು. ತುಬಚಿ-ಬಬಲೇಶ್ವರ ಏತನೀರಾವರಿ ಯೋಜನೆ ಜಾರಿಯಾದ ಮೇಲೆ ಈ ಟ್ಯಾಂಕರ್ ಬಳಕೆ ಪ್ರಮಾಣ ಕಡಿಮೆಯಾಗಿದ್ದು, ರೈತರು ನೆಮ್ಮದಿಯಿಂದ ಇದ್ದಾರೆ. ಈ ನೀರಾವರಿ ಕಾರ್ಯಗಳನ್ನು ಮೆಚ್ಚಿಯೇ ಪಕ್ಷಾತೀತವಾಗಿ ನನಗೆ ಬೆಂಬಲ ನೀಡುತ್ತಿದ್ದಾರೆ ಎಂದರು. ಹಿರಿಯ ಬಿಜೆಪಿ ಮುಖಂಡ ಚನ್ನು ಕೊಪ್ಪದ ಮಾತನಾಡಿ ಶೀಘ್ರದಲ್ಲಿಯೇ ಬಬಲೇಶ್ವರ ಭಾಗದಲ್ಲಿ ದೊಡ್ಡ ಕಾರ್ಯಕ್ರಮವನ್ನು ಏರ್ಪಡಿಸಿ, ಬೃಹತ್ ಸಂಖ್ಯೆಯಲ್ಲಿ ಬಿಜೆಪಿ ನಿಷ್ಠಾವಂತ ಕಾರ್ಯಕರ್ತರು ಸಾಮೂಹಿಕವಾಗಿ ಕಾಂಗ್ರೆಸ್ ಪಕ್ಷವನ್ನು ಸೇರ್ಪಡೆಗೊಳ್ಳಲಿದ್ದಾರೆ. ತಾವೇ ಬುತ್ತಿ ಕಟ್ಟಿಕೊಂಡು ತಮ್ಮದೇ ಪೇಟ್ರೋಲ್ ಸುಟ್ಟುಕೊಂಡು, ಎಲ್ಲೆಡೆ ತಿರುಗಾಡಿ, ಪಕ್ಷವನ್ನು ಸಂಘಟಿಸಿದ ಕಾರ್ಯಕರ್ತರಿಗೆ ಈಗ ಆ ಪಕ್ಷದಲ್ಲಿ ಬೆಲೆ ಇಲ್ಲ. ಕೆಲವು ನಾಯಕರ ವರ್ತನೆಯಿಂದ ನಿಜವಾದ ಕಾರ್ಯಕರ್ತರು ಕಾಲಕಸವಾಗಿದ್ದಾರೆ. ಅಂತವರೆಲ್ಲ ಅಲ್ಲಿಂದ ಹೊರಬಂದು ಎಂ.ಬಿ.ಪಾಟೀಲ್‍ರ ಅಭಿವೃದ್ಧಿ ಕಾರ್ಯಗಳನ್ನು ಅದರಲ್ಲೂ ನೀರಾವರಿ ಕಾರ್ಯಗಳನ್ನು ಮೆಚ್ಚಿ ಕಾಂಗ್ರೆಸ್ ಸೇರ್ಪಡೆಯಾಗುತ್ತಿದ್ದಾರೆ ಎಂದರು. ದಾಶ್ಯಾಳ ಗ್ರಾಮದ ಮಾಜಿ ಸೈನಿಕರಾದ ಸುರೇಶ ಯಲ್ಲಪ್ಪಾ ಪಡಸಲಗಿ, ಚನ್ನಯ್ಯ ಮಲ್ಲಯ್ಯ ಹಿರೇಮಠ, ಮಲ್ಲಯ್ಯ ಸಿದ್ರಾಮಯ್ಯ ಮಠಮತಿ, ಅಣ್ಣಾಸಾಬ ಅಪ್ಪಾಸಾಬ ಸಂಖ, ಜಗದೀಶ ಈರಪ್ಪಯ್ಯ ಮಠಪತಿ, ಮಲ್ಲಪ್ಪ ಪರಪ್ಪ ಮದಭಾವಿ, ಸಿದ್ದಪ್ಪ ಭೀಮಪ್ಪ ಕನ್ನಾಳ, ಸುರೇಶ ಭೀಮಪ್ಪ ಕನ್ನಾಳ ಹಾಗೂ ಬಿಜೆಪಿ ಕಾರ್ಯಕರ್ತರಾದ ಸತ್ಯಪ್ಪ ಲಚ್ಚಪ್ಪ ಸೋಲಾಪುರ, ಅರ್ಜುನಗೌಡ ಬಾಳಪ್ಪ ಬಿರಾದಾರ, ಚಾಂದಸಾಬ ನದಾಫ್, ಅಶೋಕ ಬಿರಾದಾರ, ಈರಗೊಂಡ ಸೋಲಾಪುರ, ಅಮೀನಸಾವ ಟಕ್ಕೋಡ, ಬಸಪ್ಪ ಉಪ್ಪಾರ, ಪರಪ್ಪ ಪೀರಖಾನೆ ಸೇರಿದಂತೆ ನೂರಾರು ಬಿಜೆಪಿ ಕಾರ್ಯಕರ್ತರು ಎಂ.ಬಿ.ಪಾಟೀಲರ ಸಮ್ಮುಖದಲ್ಲಿ ಕಾಂಗ್ರೆಸ್ ಪಕ್ಷ ಸೇರ್ಪಡೆಗೊಂಡರು. ಈ ಸಂದರ್ಭದಲ್ಲಿ ಜಿ.ಪಂ ಮಾಜಿ ಅಧ್ಯಕ್ಷ ವಿ.ಎಸ್.ಪಾಟೀಲ ಬಬಲೇಶ್ವರ, ಜಕ್ಕಪ್ಪ ಯಡವೆ, ಆರ್.ಜಿ.ಯರನಾಳ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸಿದ್ದು ಗೌಡನವರ, ಭೀರಪ್ಪ ಟಕ್ಕಳಕಿ, ಭೀಮು ನಾಟಿಕಾರ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರ, ಇನ್ನೂ ನಿಡೋಣಿ ಕಾರ್ಯಕ್ರಮದಲ್ಲಿಯೂ ನೂರಾರು ಕಾರ್ಯಕರ್ತರು ಬಿಜೆಪಿ ತೊರೆದು ಅವರೆಲ್ಲ ಕಾಂಗ್ರೆಸ್ ಪಕ್ಷವನ್ನು ಸೇರ್ಪಡೆಗೊಂಡರು. ನಿಡೋಣಿ ಗ್ರಾಮದ ಕಾರ್ಯಕರ್ತರಾದ ಬಸಪ್ಪ ಗದ್ಯಾಳ, ಮುರುಗೇಪ್ಪ ಗದ್ಯಾಳ, ಶಂಕರ ಗದ್ಯಾಳ, ಶರಣಪ್ಪ ಗದ್ಯಾಳ, ರಮೇಶ ಗುಣದಾಳ, ಸಂದೀಪ ಗುಣದಾಳ, ಅಶೋಕ ಗದ್ಯಾಳ, ಶರಣಪ್ಪ ಬಾನಪ್ಪಗೋಳ, ಬೈಯನ್ನ ಬಾನಪ್ಪಗೋಳ, ಆನಂದ ಜಿರ್ಲಿ, ರಾಜು ಮಾದನಶೆಟ್ಟಿ, ಸಂಜೀವ ಅರ್ಜುಣಗಿ, ಭೀಮಪ್ಪ ಗುಣದಾಳ, ರಾಚಪ್ಪ ಗುಣದಾಳ ಸೇರಿದಂತೆ ನೂರಾರು ಬಿಜೆಪಿ ಕಾರ್ಯಕರ್ತರು ಎಂ.ಬಿ.ಪಾಟೀಲರ ಸಮ್ಮುಖದಲ್ಲಿ ಕಾಂಗ್ರೆಸ್ ಪಕ್ಷ ಸೇರ್ಪಡೆಗೊಂಡರು.

ಈ ಸಂದರ್ಭದಲ್ಲಿ ಕೆ.ಎಂ.ಎಫ್ ನಿರ್ದೇಶಕ ಶ್ರೀಶೈಲಗೌಡ ಬಿರಾದಾರ, ಜಿ.ಪಂ ಮಾಜಿ ಅಧ್ಯಕ್ಷ ವಿ.ಎಸ್.ಪಾಟೀಲ ಬಬಲೇಶ್ವರ, ಜಕ್ಕಪ್ಪ ಯಡವೆ, ಆರ್.ಜಿ.ಯರನಾಳ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸಿದ್ದು ಗೌಡನವರ, ಭೀರಪ್ಪ ಟಕ್ಕಳಕಿ, ಶಂಕರಗೌಡ ಪೋಲಿಸ್‍ಪಾಟೀಲ, ಪರಗೊಂಡ ಶಹಪುರ, ಮಾಳು ತೇರದಾಳ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.

Share this on:
error: Content is protected !!