Latest Posts

ಲಕ್ಷದ್ವೀಪದಿಂದ ಹಿಂತಿರುಗಲು ಖೋಡಾ ಪಟೇಲ್ ಗೆ ಕೇಂದ್ರದಿಂದ ಸೂಚನೆ.

ಕವರತ್ತಿ: ನಡೆಯುತ್ತಿರುವ ಭಾರೀ ಪ್ರತಿಭಟನೆಯ ನಡುವೆ ಲಕ್ಷಧ್ವೀಪ ಬೇಟಿ ಮಾಡಲು ಬಂದಿದ್ದ ಆಡಳಿತಾಧಿಕಾರಿ ಪ್ರಪುಲ್ ಖೋಡಾ ಪಟೇಲ್ ತನ್ನ ಬೇಟಿಯನ್ನು ಮೊಟಕುಗೊಳಿಸಿ ಹಿಂತಿರುಗಲಿದ್ದಾರೆ.

ಒಂದು ವಾರದ ಬೇಟಿಯನ್ನು ಮೊಟಕುಗೊಳಿಸಿ ಎರಡು ದಿನದೊಳಗೆ ಹಿಂತಿರುಗುವಂತೆ ಕೇಂದ್ರದಿಂದ ಸೂಚನೆ ಬಂದಿರುವುದಾಗಿ ವರದಿಗಳು ಬಂದಿವೆ.
ಏತನ್ಮಧ್ಯೆ ಪಟೇಲ್ ವಿರುದ್ದ ಭ್ರಷ್ಟಾಚಾರದ ಆರೋಪಗಳು ಬರತೊಡಗಿದ್ದು, ಸುಮಾರು 400ಕೋಟಿರೂಗಳ ನಿರ್ಮಾಣ ಗುತ್ತಿಗೆಗಳನ್ನು ತನಗೆ ಬೇಕಾದವರಿಗೆ ಮಾತ್ರ ಕೊಟ್ಟು, ಹಾಗೆಯೇ ಅಧಿಕೃತ ನಿವಾಸವನ್ನು ವಿನ್ಯಾಸಗೊಳಿಸಲು ಸುಮಾರು 17.5ಕೋಟಿ ರೂಗಳ ಭ್ರಷ್ಟಾಚಾರ ನಡೆದಿದೆ ಎಂದು ಆರೋಪಿಸಿ ಅಲ್ಲಿನ ಅಧಿಕಾರಿಗಳು ಪ್ರಧಾನಮಂತ್ರಿ ಯವರಿಗೆ ಪತ್ರವನ್ನು ಬರೆದಿದ್ದಾರೆ.

Share this on:
error: Content is protected !!