ಬೆಂಗಳೂರು: ಹೈದರಾಬಾದ್ ವಿವಿ ವಿದ್ಯಾರ್ಥಿ ರೋಹಿತ್ ವೇಮುಲಾ ಪ್ರೇಮ ವೈಫಲ್ಯದಿಂದ ಆತ್ಮಹತ್ಯೆ ಮಾಡಿಕೊಂಡರೆ, ಅದನ್ನು ಮೋದಿ ತಲೆಗೆ ಕಟ್ಟಲು ಯತ್ನಿಸಲಾಗಿತ್ತು ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಹೇಳಿಕೆ ವಿವಾದಕ್ಕೆ ಕಾರಣವಾಗಿದೆ.
ಸೋಮವಾರ ರಾಜ್ಯ ರೈತಮೋರ್ಚಾ ಪದಾಧಿಕಾರಿಗಳ ಸಭೆ ವೇಳೆ ಮಾತನಾಡಿದ ಅವರು, ಪ್ರಧಾನಿ ನರೇಂದ್ರ ಮೋದಿ ಅವರ ವಿರುದ್ಧ ಪ್ರತಿಪಕ್ಷಗಳು ಹೇಗೆ ಹೊಟ್ಟೆಕಿಚ್ಚು ಪಡುತ್ತಿವೆ. ಹೈದರಾಬಾದ್ನಲ್ಲಿ ರೋಹಿತ್ ವೇಮುಲಾ ಪ್ರೀತಿ ವಿಚಾರದಲ್ಲಿ ನಿರಾಸೆಯುಂಟಾಗಿ ಆತ್ಮಹತ್ಯೆ ಮಾಡಿಕೊಂಡರು. ಆ ಸಾವಿನ ಕೇಸ್ನ್ನೂ ನರೇಂದ್ರ ಮೋದಿ ತಲೆಗೆ ಕಟ್ಟಲು ಪ್ರಯತ್ನ ಪಟ್ಟರು. ಅಂದರೆ ಪ್ರಧಾನಿ ಮೋದಿ ವಿರುದ್ಧ ಅದೆಷ್ಟರ ಮಟ್ಟಿಗೆ, ದ್ವೇಷ-ಹೊಟ್ಟೆಕಿಚ್ಚು ಇದೆ ಎಂಬುದನ್ನು ಯೋಚನೆ ಮಾಡಿ. ಆದರೆ, ನಂತರ ಅದು ಫೇಲ್ ಆಯ್ತು ಎಂದಿದ್ದಾರೆ.
ರೋಹಿತ್ ವೇಮುಲಾ ಲವ್ ಫೇಲ್ಯೂರ್ನಿಂದ ಆತ್ಮಹತ್ಯೆ ಮಾಡಿಕೊಂಡ್ರೆ ಅದನ್ನ ಮೋದಿ ತಲೆಗೆ ಕಟ್ಟಿದ್ರು: ಸಿ.ಟಿ.ರವಿ
