ಬೆಂಗಳೂರು: ಲಕ್ಷಗಳು ಸಿಗಬಹುದೆಂಬ ಭರವಸೆಯಿಂದ ಹಳೆಯ ಒಂದು ರೂಪಾಯಿ ನಾಣ್ಯವನ್ನು ಆನ್ಲೈನ್ನಲ್ಲಿ ಮಾರಾಟ ಮಾಡಿದ ಶಿಕ್ಷಕಿ ಒಂದು ಲಕ್ಷಕ್ಕೂ ಹೆಚ್ಚು ಹಣ ಕಳೆದುಕೊಂಡಿದ್ದಾಳೆ.
ಬೆಂಗಳೂರಿನ ಸರ್ಜಾಪುರ ಮುಖ್ಯ ರಸ್ತೆಯಲ್ಲಿರುವ ಕೈಕೊಂಡ್ರಹಳ್ಳಿಯ ಶಿಕ್ಷಕಿ ಯ ಮೇಲೆ ಆನ್ಲೈನ್ ವಂಚನೆ ನಡೆದಿದೆ.
38 ವರ್ಷದ ಶಿಕ್ಷಕಿ ತನ್ನ 1947 ಇಸವಿಯ ನಾಣ್ಯವನ್ನು ಜೂನ್ 15 ರಂದು ಆನ್ಲೈನ್ ಸೈಟ್ನಲ್ಲಿ 10 ಲಕ್ಷ ರೂಪಾಯಿಗೆ ಮಾರಾಟಕ್ಕೆ ಇಟ್ಟಿದ್ದರು.
ಹಳೆಯ ನಾಣ್ಯಗಳು ಲಕ್ಷ ಮೌಲ್ಯದ್ದಾಗಿದೆ ಎಂದು ಇತ್ತೀಚೆಗೆ ಸಾಕಷ್ಟು ಸುದ್ದಿಗಳು ಬಂದಿದ್ದು, ಅವರ ಮಗಳು ಹಳೆಯ ನಾಣ್ಯಗಳನ್ನು ಆನ್ಲೈನ್ ಮೂಲಕ
ಮಾರಾಟ ಮಾಡಿ ಲಕ್ಷಾಂತರ ರುಪಾಯಿ ಸಂಪಾದಿಸಿದ ಸುದ್ದಿಯನ್ನು ತೋರಿಸಿದ್ದು ಆದ್ದರಿಂದ ನಾನು ಮಾರಾಟಕ್ಕೆ ಇಟ್ಟೆ ಎಂದು ಶಿಕ್ಷಕಿ ಪೋಲಿಸರಿ ತಿಳಿಸಿದ್ದಾಳೆ.
ಆನ್ಲೈನ್ ಸೈಟ್ನಲ್ಲಿ ಆಕೆ ಹಾಕಿದ್ದ ನಾಣ್ಯವನ್ನು ಒಬ್ಬ ವ್ಯಕ್ತಿಯು 1 ಕೋಟಿ ರೂ.ಗೆ ಖರೀದಿಸಲು ಬಯಸುತ್ತೇನೆ ಎಂದು ಹೇಳಿ ಆಕೆಯನ್ನು ಸಂಪರ್ಕಿಸಿದನು.
ಇಷ್ಟು ದೊಡ್ಡ ಮೊತ್ತವನ್ನು ವರ್ಗಾಯಿಸಲು ಬೇಕಾದ ಆದಾಯ ತೆರಿಗೆ ಪಾವತಿಸಲು ಹಣವನ್ನು ಆಕೆಯಿಂದ ಅವರು ಕೇಳಿದನು ಆ ವ್ಯಕ್ತಿಯು ನಾಣ್ಯಕ್ಕೆ 1 ಕೋಟಿ ರೂ. ಪಾವತಿಸುತ್ತಾನೆ ಎಂದು ನಂಬಿದ ಶಿಕ್ಷಕಿ ವಿವಿಧ ಖಾತೆಗಳಿಂದ 1 ಲಕ್ಷ ರೂ.ಗಿಂತ ಹೆಚ್ಚಿನ ಹಣವನ್ನು ಹಲವಾರು ಬಾರಿ ಆತನಿಗೆ ವರ್ಗಾಯಿಸಿದರು.
ಆದರೆ ಹಣವನ್ನು ಹಸ್ತಾಂತರಿಸಿದ ನಂತರ ಆತನಿಂದ ಕಡೆಯಿಂದ ಯಾವುದೇ ಪ್ರತಿಕ್ರಿಯೆ ಇಲ್ಲದಿದ್ದಾಗ, ಇದು ಮೋಸ ಮಾಡಲಾಗಿದೆ ಎಂದು ಶಿಕ್ಷಕರಿಗೆ ಅರಿವಾಗಿ ಪೊಲೀಸರಿಗೆ ದೂರು ನೀಡಿದ್ದಾಳೆ. ಪೊಲೀಸರು ಆರೋಪಿಗಳನ್ನು ಬಂಧಿಸಲು ಪ್ರಯತ್ನಿಸುತ್ತಿದ್ದಾರೆ
ಹಳೆಯ ಒಂದು ರೂ ನಾಣ್ಯ 10 ಲಕ್ಷ ರೂ ಮಾರಾಟಕ್ಕೆ ಒಂದು ಲಕ್ಷ ರೂ ಕಳೆದುಕೊಂಡ ಶಿಕ್ಷಕಿ
