Latest Posts

ಮಂಗಳೂರು: ಕೇರಳದಿಂದ ದ.ಕ.ಪ್ರಯಾಣಕ್ಕೆ ಆರ್‌ಟಿಪಿಸಿಆರ್ ನೆಗೆಟಿವ್ ರಿಪೋರ್ಟ್ ಕಡ್ಡಾಯ

ಮಂಗಳೂರು,ಜೂ .28: ಕೇರಳದಿಂದ ದಕ್ಷಿಣ ಕನ್ನಡಕ್ಕೆ ಬರಲು ಆರ್‌ಟಿಪಿಸಿಆರ್ ನೆಗೆಟಿವ್ ರಿಪೋರ್ಟ್ ಕಡ್ಡಾಯವಾಗಿರಬೇಕು ಎಂದು ಜಿಲ್ಲಾಧಿಕಾರಿ ಡಾ . ರಾಜೇಂದ್ರ ಕೆ.ವಿ ಆದೇಶ ಹೊರಡಿಸಿದ್ದಾರೆ.

‘ಕೇರಳದಲ್ಲಿ ಡೆಲ್ಲಾ ಸೋಂಕಿನ ಲಕ್ಷಣಗಳು ಕಂಡು ಬಂದಿದ್ದು , ಈ ಹಿನ್ನಲೆಯಲ್ಲಿ ರಾಜ್ಯ ಸರ್ಕಾರದ ಆದೇಶದ ಪ್ರಕಾರ ಕೇರಳ , ಗಡಿಭಾಗದಿಂದ ಸಂಚರಿಸುವವರಿಗೆ ದಕ್ಷಿಣ ಕನ್ನಡ ಜಿಲ್ಲೆಗೆ ಬರಲು ಆರ್‌ಟಿಪಿಸಿಆರ್ ನೆಗೆಟಿವ್ ರಿಪೋರ್ಟ್ ಕಡ್ಡಾಯವಾಗಿರಬೇಕು” ಎಂದಿದ್ದಾರೆ.

ಇನ್ನು ಗಡಿಗಳಲ್ಲಿಯೂ ತಪಾಸಣೆ ಕ್ರಮಗಳನ್ನು ಜರುಗಿಸಲು ಜಿಲ್ಲಾಡಳಿತ ಮುಂದಾಗಿದ್ದು , ತಲಪಾಡಿ , ನೆಟ್ಟಣಿಗೆ ಮುಡೂರು , ಸಾರಡ್ಕ , ಜಾಲ್ಲೂರು ಗಡಿಗಳಲ್ಲಿ ತಪಾಸಣೆಯನ್ನು ಹೆಚ್ಚಿಸಲಾಗಿದ್ದು, ಈ ನಿಯಮ ನಾಳೆಯಿಂದಲೇ ಜಾರಿಗೊಳಿಸಲಾಗುವುದು ಎಂದು ರಾಜೇಂಂದ್ರ ಕೆ.ವಿ ಆದೇಶ ಹೊರಡಿಸಿದ್ದಾರೆ.

Share this on:
error: Content is protected !!