Latest Posts

ಈ ಬಾರಿಯೂ 8 ನೇ ತರಗತಿ ವಿದ್ಯಾರ್ಥಿಗಳ ಕೈತಪ್ಪಿದ ಸೈಕಲ್

ಬೆಂಗಳೂರು : ರಾಜ್ಯದ 8 ನೇ ತರಗತಿ ವಿದ್ಯಾರ್ಥಿಗಳಿಗೆ ರಾಜ್ಯ ಸರ್ಕಾರ ಬಿಗ್ ಶಾಕ್ ನೀಡಿದೆ. ಕೊರೊನಾ ದಿಂದಗಿ ಸರ್ಕಾರಿ / ಅನುದಾನಿತ ಶಾಲೆಗಳಿಗೆ ಎಲ್ಲಾ ವರ್ಷವೂ 8 ನೇ ತರಗತಿ ವಿದ್ಯಾರ್ಥಿಗಳಿಗೆ ನೀಡುವ ಸೈಕಲ್ ಈ ಬಾರಿಯೂ ನೀಡುವುದು ಅನುಮಾನ ಎನ್ನಲಾಗಿದೆ . ಕಳೆದ 2019-20 ನೇ ಸಾಲಿನಲ್ಲಿ ರಾಜ್ಯದಲ್ಲಿ 2,44,901 ಬಾಲಕಿಯರು ಹಾಗೂ 2,59,624 ಬಾಲಕರಿಗೆ ಸೈಕಲ್ ವಿತರಣೆ ಮಾಡಲಾಗಿತ್ತು . ಕಳೆದ ವರ್ಷ 5 ಲಕ್ಷ ವಿದ್ಯಾರ್ಥಿಗಳಿಗೆ ಸೈಕಲ್ ವಿತರಣೆ ಮಾಡುವ ಅಂದಾಜು ಇತ್ತು . ಆದರೆ ಕೊರೊನಾ ಲಾಕ್ ಡೌನ್ ನಿಂದಾಗಿ , ಅನುದಾನದ ಕೊರತೆ ಕಾರಣಗಳಿಂದಾಗಿ ಸೈಕಲ್ ವಿತರಣೆ ಯನ್ನು ಈ ವರ್ಷವು ಕೈಬಿಡಲಾಗಿತ್ತು

Share this on:
error: Content is protected !!