Latest Posts

ಯಶಸ್ವಿಯಾಗಿ ನಡೆದ ಹಾಸನ ಜಿಲ್ಲಾ SKSSF ಅದಾಲತ್ ಹಾಗೂ ಸಮಸ್ತ ಲೀಡರ್ಸ್ ಮೀಟ್ ಕಾರ್ಯಕ್ರಮ.

ಸೋಮವಾರ : ಹಾಸನ ಜಿಲ್ಲಾ SKSSF ಸಮಿತಿ ವತಿಯಿಂದ ನಡೆಸಲ್ಪಟ್ಟ ಸಮಸ್ತ ಲೀಡರ್ಸ್ ಮೀಟ್ ಹಾಗೂ ಅದಾಲತ್ ಕಾರ್ಯಕ್ರಮವನ್ನು ಸಕಲೇಶಪುರ ತಾಲ್ಲೂಕಿನ ಆನೇಮಹಲ್ ರೇಂಜ್ ನಲ್ಲಿ ನಡೆಸಲಾಯಿತು.
ಸಮಾರಂಭದಲ್ಲಿ ಕೇಂದ್ರ ಸಮಿತಿಯಿಂದ ಮುಖ್ಯ ವೀಕ್ಷಕರಾಗಿ ಬಂದಿದ್ದ ತಾಜುದ್ದೀನ್ ರಹ್ಮಾನಿ ಉಸ್ತಾದರು ಸಮಸ್ತದ ಕುರಿತು ಹಾಗೂ ಅದರ ಪೋಷಕ ಸಂಘಟನೆಗಳ ಕಾರ್ಯವೈಖರಿಯನ್ನು ಮನಮುಟ್ಟುವಂತೆ ವಿವರಿಸಿದರು.
ಮಕ್ಕಳು ಧಾರ್ಮಿಕ ಚೌಕಟ್ಟಿನೊಳಗೆ ಬೆಳೆಯುತ್ತಾ ಸಮಾಜದಲ್ಲಿ ಉತ್ತಮ ವ್ಯೆಕ್ತಿತ್ವದೊಂದಿಗೆ ಉಪಕಾರಿಯಾದ ಮನುಷ್ಯನಾಗಿ ಬೆಳೆಯಲು,ಹಾಗೂ ಅವರ ಉನ್ನತಿಗಾಗಿ ತಮ್ಮ ಮಕ್ಕಳನ್ನು SKSSF ನೊಂದಿಗೆ ಕೈಜೋಡಿಸಲು ಪ್ರೇರೇಪಿಸಿ ಅವರ ಬದುಕಿಗೊಂದು ದಾರಿ ತೋರಿಸಬೇಕೆಂದು ಪೋಷಕರಿಗೆ ಕಿವಿಮಾತು ಹೇಳಿದರು.

ಧಾರ್ಮಿಕ ವಿಧ್ಯಾಭ್ಯಾಸದೊಂದಿಗೆ ಸತ್ಯವಿಶ್ವಾಸಿಯನ್ನು ಲೌಕಿಕ ಶಿಕ್ಷಣದ ಜೊತೆಗೆ ಉತ್ತಮ ಅಭಿರುಚಿಯೊಂದಿಗೆ ಸಮಾಜ ಕಟ್ಟಲು ಸಮಸ್ತ ಹಾಗೂ ಅದರ ಪೋಷಕ ಸಂಘಟನೆಗಳ ಗುರಿಯನ್ನು ಮನಮುಟ್ಟುವಂತೆ ವಿವರಿಸಿದರು,ಮುಖ್ಯ ಪ್ರಭಾಷಣ ಮಾಡಿದ ರಹ್ಮಾನಿ ಉಸ್ತಾದರು ಇದೇ ಬರುವ ಡಿ.5 ರಂದು ಪ್ರಾರಂಭವಾಗಲಿರುವ SKSSF ಸದಸ್ಯತ್ವ ಅಭಿಯಾನ ಯಶಸ್ವಿಗಳಿಸಲು ಕರೆ ನೀಡಿದರು.

ಕಾರ್ಯಕ್ರಮಕ್ಕೆ ಆಗಮಿಸಿದ್ದ ನಾಯಕರಾದ ಇಸ್ಮಾಯಿಲ್ ಯಮಾನಿ ಉಸ್ತಾದರು ಅದಾಲತ್ ಬಗ್ಗೆ ವಿವರಣೆಯನ್ನು ನೀಡಿ,ಅದಾಲತ್ ನ್ನು ನಡೆಸಿಕೊಟ್ಟರು.

ಇದೇ ಸಂಧರ್ಭದಲ್ಲಿ ಹಾಸನ ಜಿಲ್ಲಾ SKSSF ಶಾಖೆಗಳಲ್ಲಿ ಎರಡು ಹೊಸ ಶಾಖೆಗಳನ್ನು ರಚಿಸಲಾಯಿತು.
ಸಕಲೇಶಪುರ SKSSF ಶಾಖೆ ಹಾಗೂ ನಾರ್ವೆ SKSSF ಶಾಖೆ ಎಂಬ ಎರಡು ಹೊಸ ಶಾಖೆಯನ್ನು ರಚಿಸಲಾಯಿತು,ಹೊಸ ಶಾಖೆಗಳಿಗೆ ಬೇಕಾದ ಕಿಟ್ ಅನ್ನು ತಾಜುದ್ದೀನ್ ಧಾರಿಮಿರವರು ಹಸ್ತಾಂತರಿಸಿದರು.
ಕಾರ್ಯಕ್ರಮವನ್ನು ಇಬ್ರಾಹಿಂ ಮುಸ್ಲಿಯಾರ್ ಆನೇಮಹಲ್ ರವರು ಉಧ್ಘಾಟಿಸಿ ಸಮಸ್ತದ ಕುರಿತು ಅರಿವು ಮೂಡಿಸಿದರು.
ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಹಾಸನ ಜಿಲ್ಲಾ SKSSF ಅಧ್ಯಕ್ಷರಾದ ಜನಾಬ್ ಸಲೀಂ ಕೊಲ್ಲಹಳ್ಳಿ ರವರು ವಹಿಸಿದ್ದರು, ಕಾರ್ಯಕ್ರಮಕ್ಕೆ ಸಾಹುಲ್ ದಾರಿಮಿ ಉಸ್ತಾದರು ಸ್ವಾಗತ ಭಾಷಣ ಮಾಡಿ ಎಲ್ಲರನ್ನೂ ಸ್ವಾಗತಿಸಿದರು.
ನಿರೂಪಣೆಯನ್ನು ಸಮದ್ ಫೈಝಿ ಆನೇಮಹಲ್ ನಿರ್ವಹಿಸಿದರು.
ದುಃಹಾ ನೇತೃತ್ವ ನೌಶಾದ್ ಫೈಝಿ ಉಸ್ತಾದರು ವಹಿಸಿದ್ದರು, ಕಾರ್ಯಕ್ರಮಕ್ಕೆ ಆಗಮಿಸಿದ್ದ ಎಲ್ಲಾ ಗಣ್ಯರು ಹಾಗೂ ಸದಸ್ಯರಿಗೆ ಧನ್ಯವಾದ ಹೇಳುತ್ತಾ ಫಾರೂಕ್ ಮುಸ್ಲಿಯಾರ್ ಕೊಲ್ಲಹಳ್ಳಿ ವಂಧನಾರ್ಪಣೆ ಮಾಡಿದರು.

Share this on:
error: Content is protected !!