Latest Posts

ಸಕಲೇಶಪುರ SKSSF ಶಾಖೆ ವತಿಯಿಂದ ಬಾಬರೀ ಸ್ಮರಣೆ ಹಾಗೂ ಪ್ರಾರ್ಥನಾ ಸಂಗಮ

ಡಿಸೆಂಬರ್ 6: ಭಾರತ ದೇಶದಲ್ಲಿ ಸಂವಿಧಾನಕ್ಕೆ ನೀಡಿದ ಮೊದಲ ಕೊಡಲಿಯೇಟು ಎಂದು ಹೇಳಬಲ್ಲ ಬಾಬರಿ ಮಸೀದಿಯ ಕೆಡವಿಕೆಯ ವೇಳೆಯಲ್ಲಿ ನಡೆದ ಅನಾಹುತಗಳು,ಆಗು ಹೋಗುಗಳ ಬಗ್ಗೆ ಸ್ಮರಣೆ ನಡೆಸಲಾಯಿತು.


ದೇಶದಲ್ಲಿ ಬಾಬರಿ ಉರುಳಿಸಿದ ಸಂಧರ್ಭದಲ್ಲಿ ದಕ್ಷಿಣ ಭಾರತದಲ್ಲಿ ಮುಸಲ್ಮಾನರು ಕೈಗೊಂಡ ತೀರ್ಮಾನಗಳು ,ಸಮಸ್ತದ ನೇತಾರರು ಸಮುದಾಯಕ್ಕೆ ನೀಡಿದ ಸೂಚನೆಗಳ ಕುರಿತು, ಶಾಂತಿಗಾಗಿ ನೀಡಿದ ಕರೆ ಹಾಗೂ ಅಂದಿನ ಸಮಯದಲ್ಲಿ ವಿವೇಚನೆಯುಕ್ತ ನಾಯಕತ್ವವನ್ನು ನೀಡಿ ದೇಶದಲ್ಲಿ ಶಾಂತಿ ಕಾಪಾಡುವಲ್ಲಿ ಪ್ರಮುಖ ಪಾತ್ರ ವಹಿಸಿದ ಪಾಣಕ್ಕಾಡ್ ಮುಹಮ್ಮದಲಿ ಶಿಹಾಬ್ ತಂಙಳರ ಜೀವನ ತ್ಯಾಗಗಳ ಕುರಿತು ಅನುಸ್ಮರಣೆ ಮಾಡಲಾಯಿತು.
ಬಾಬರಿ ಇತಿಹಾಸ ಹಾಗೂ ಅಂದಿನ ಸಮಯದಲ್ಲಿ ಇಸ್ಲಾಮಿನ ಶತೃಗಳಿಂದ ಪ್ರಾಣತೆತ್ತ ಸತ್ಯವಿಶ್ವಾಸಿಗಳಿಗಾಗಿ ವಿಶೇಷ ಪ್ರಾರ್ಥನೆ ನಡೆಸಲಾಯಿತು.


ಸಂಗಮದಲ್ಲಿ ನೌಶಾದ್ ಫೈಝಿ ಉಸ್ತಾದರು ದುಃಹಾ ನೇತೃತ್ವ ನೀಡಿದ್ದರು.
SKSSF ಸಕಲೇಶಪುರ ಶಾಖೆಯ ಅಧ್ಯಕ್ಷರಾದ ಷರೀಪ್ ಅರ್ಶದಿ, ಯೂಸುಪ್ ಅಝ್ಹರಿ,ಹಾಗೂ ಸಹದ್ ಪೈಝಿ,ಮತ್ತು ಜಿಲ್ಲಾ ನಾಯಕರಾದ ಫಾರೂಕ್ ಮುಸ್ಲಿಯಾರ್ ಉಪಸ್ಥಿತರಿದ್ದರು.

Share this on:
error: Content is protected !!