Latest Posts

ಹಾಸನ ಜಿಲ್ಲಾ ಎಸ್ ವೈ ಎಸ್ ನೂತನ ಸಮಿತಿ ರಚನೆ : ಅಧ್ಯಕ್ಷರಾಗಿ ಸಲೀಂ ಪೈಝಿ ಸುಂಡೇಕೆರೆ ಆಯ್ಕೆ

ಹಾಸನ : ಸಮಸ್ತ ಕೇರಳ ಜಂಇಯ್ಯತುಲ್ ಉಲಮಾ ಇದರ ಪೋಷಕ ಸಂಘಟನೆಯಾಗಿರುವ ಸುನ್ನೀ ಯುವ ಜನ ಸಂಘ (ಎಸ್ ವೈ ಎಸ್ ) ಇದರ ನೂತನ ಸಮಿತಿಯನ್ನು ರಚಿಸಲಾಯಿತು.
ಸಭೆಯನ್ನು ಉಧ್ಘಾಟಿಸಿ ಮಾತನಾಡಿದ ಎಸ್.ಬಿ.ದಾರಿಮಿ ಉಸ್ತಾದರು ಹಾಸನ ಜಿಲ್ಲೆಯಾಧ್ಯಾಂತ ಸಮಸ್ತದ ಸಂದೇಶವನ್ನು ಹಾಗೂ ಅದರ ಕಾರ್ಯಗಳನ್ನು ಪ್ರಚಾರ ಪಡಿಸುವ ನಿಟ್ಟಿನಲ್ಲಿ ಅವಿರತ ಶರ್ಮವಹಿಸಿದರೆ ಆ ಮೂಲಕ ಎಲ್ಲಾ ಜಾತಿ ಜನಾಂಗದ ಪ್ರಶಂಸೆಯನ್ನು ಗಿಟ್ಟಿಸಿಕೊಳ್ಳಬಹುದಲ್ಲದೇ ಪಾರತ್ರಿಕ ವಿಜಯ ಸಾಧಿಸಬಹುದು ಎಂದರು.
ಸಭೆಯ ಅಧ್ಯಕ್ಷತೆಯನ್ನು ವಹಿಸಿದ್ದ ಎಸ್ ವೈ ಎಸ್ ಕರ್ನಾಟಕ ರಾಜ್ಯ ಸಂಚಾಲಕರಾದ ಮೌಲಾನ ಯು.ಕೆ.ಅಬ್ದುಲ್ ಅಝೀಝ್ ದಾರಿಮಿ ಉಸ್ತಾದರು ಮಾತನಾಡಿ ಪೂರ್ವಿಕ ಉಲಮಾಕರು ನಮಗೆ ತೋರಿಸಿಕೊಟ್ಟ ಸಮಸ್ತದ ಸಂದೇಶವೇ ಸತ್ಯದ ಹಾದಿಯಾಗಿದೆ,ಭಾರತದಲ್ಲಿ ಧರ್ಮ ಪ್ರಚಾರಕ್ಕೆ ಮುಕ್ತ ಅವಕಾಶ ಇದೆ,ಇದನ್ನು ನಾವು ದುರುಪಯೋಗಪಡಿಸದೇ ಶಾಂತಿ ಮತ್ತು ಭಾತೃತ್ವಕ್ಕೆ ಒತ್ತು ನೀಡಿ ಮುಂದುವರಿಯಬೇಕು ಎಂದು ತಿಳಿಸಿದರು.
ಸಭೆಯಲ್ಲಿ ಕೆ.ಎಲ್ ಉಮರ್ ದಾರಿಮಿ ಸಂಘಟನೆಯ ಬಗ್ಗೆ ಅದರ ಕಾರ್ಯಗಳನ್ನು ನಿರ್ವಹಿಸುವ ಬಗ್ಗೆ ಮಾಹಿತಿ ನೀಡಿದರು.
ವೀಕ್ಷಕರಾಗಿ ಹಾಜಿ ಹಕೀಂ ಪರ್ತಿಪ್ಪಾಡಿ ಕೇಂದ್ರ ಕೌನ್ಸಿಲ್ ಸದಸ್ಯರು ಸಭೆಗೆ ಆಗಮಿಸಿದ್ದರು.

ನೂತನ ಸಮಿತಿಯಲ್ಲಿ ಅಧ್ಯಕ್ಷರಾಗಿ ಸಲೀಂ ಪೈಝಿ,ಸುಂಡೇಕೆರೆ, ಉಪಾಧ್ಯಕ್ಷರಾಗಿ ಉಮರ್ ಮುಸ್ಲಿಯಾರ್ ಕೊಲ್ಲಹಳ್ಳಿ,
ಪ್ರ.ಕಾರ್ಯದರ್ಶಿಯಾಗಿ ಬದ್ರುದ್ದೀನ್ ದಾರಿಮಿ,ಕಾರ್ಯದರ್ಶಿಯಾಗಿ ಸಮದ್ ಫೈಝಿ,ಆನೇಮಹಲ್ ಹಾಗೂ ಕೋಶಾಧಿಕಾರಿಯಾಗಿ ಇಬ್ರಾಹೀಮ್ ಮುಸ್ಲಿಯಾರ್ ಆನೇಮಹಲ್ ರವರು ಆಯ್ಕೆಯಾಗಿದ್ದಾರೆ.
ಪದಾಧಿಕಾರಿಗಳಾಗಿ,ಅಬ್ಬು ಗುಲಗಳಲೆ,ಅಬ್ಬಾಸ್ ಸುಂಡೇಕೆರೆ,ಬೀರಾನ್ ಆನೇಮಹಲ್,ಖಾದರ್ ಸಕಲೇಶಪುರ ರವರು ಆಯ್ಕೆಯಾದರು.

ಮಜ್ಲಿಸುನ್ನೂರು ವಿಭಾಗದ ಪಧಾದಿಕಾರಿಗಳಾಗಿ ಇಸ್ಮಾಯಿಲ್ ದಾರಿಮಿ ಸುಂಡೇಕೆರೆ,ಶರೀಫ್ ಅರ್ಶದಿ ಹಲಸುಳಿಗೆ,ಫಯಾಝ್ ಫೈಝಿ ಸಂಡೇಕೆರೆ,ಫಾರೂಕ್ ಮುಸ್ಲಿಯಾರ್ ಕೊಲ್ಲಹಳ್ಳಿ ರವರನ್ನು ಆಯ್ಕೆಮಾಡಲಾಯಿತು.

ಆಮಿಲ ವಿಭಾಗದಲ್ಲಿ ಅಬ್ಬಾಸ್ ಅಝ್ಹರಿ ನಾರ್ವೆ, ಸಲಹೆಗಾರರನ್ನಾಗಿ ಪೋಕರ್ ಹಾಜಿ ಆನೇಮಹಲ್,ಯೂಸುಫ್ ,
ಅಹಮದ್ ಭಾವಾರನ್ನು ಆಯ್ಕೆ ಮಾಡಲಾಯಿತು.
ಕಾರ್ಯಕ್ರಮದಲ್ಲಿ ನೌಶಾದ್ ಫೈಝಿ,ಇಬ್ರಾಹಿಂ ಮುಸ್ಲಿಯಾರ್,ಸಲೀಂ ಕೊಲ್ಲಹಳ್ಳಿ,ರವರು ಸಭೆಯನ್ನುದ್ದೇಶಿಸಿ ಮಾತನಾಡಿದರು.
ಸ್ಥಳೀಯ ಖತೀಬ್ ನಾಸಿರ್ ದಾರಿಮಿ ಉಸ್ತಾದರು ದುಃಹಾ ನೆರವೇರಿಸಿದರು.
ಸಭೆಗೆ ಜಿಲ್ಲೆಯ ಮೊಹಲ್ಲಾಗಳಿಂದ ಆಗಮಿಸಿದ್ದ ಹಲವಾರು ಗಣ್ಯರನ್ನು ಇಸ್ಮಾಯಿಲ್ ದಾರಿಮಿ ಉಸ್ತಾರು ಸ್ವಾಗತಿಸಿದರು.

Share this on:
error: Content is protected !!