Latest Posts

ಸಂಘಪರಿವಾರದ ಕಾರ್ಯಕರ್ತರಿಂದ ಹತ್ಯೆಯಾದ ಶಹೀದ್ ಶಮೀರ್ ಮನೆಗೆ ಧಾರವಾಡ ಜಿಲ್ಲಾ ಕಾಂಗ್ರೆಸ್ ಸಮಿತಿ ಭೇಟಿ.

ಪ್ರಕರಣವನ್ನು ಸಿಬಿಐ ತನಿಖೆಗೆ ಒಪ್ಪಿಸುವಂತೆ ಆಗ್ರಹ.

ಮೃತನ ಕುಟುಂಬಕ್ಕೆ ಸರಕಾರದಿಂದ 25 ಲಕ್ಷ ಪರಿಹಾರ ನೀಡುವಂತೆ ಒತ್ತಾಯ.

ಸಂತ್ರಸ್ತ ಕುಟುಂಬಕ್ಕೆ ಕಾನೂನು ನೆರವಿನ ಭರವಸೆ ನೀಡಿದ ಕಾಂಗ್ರೆಸ್ ನಿಯೋಗ

ಗದಗ: ಜಿಲ್ಲೆಯ ನರಗುಂದ ತಾಲೂಕಿನಲ್ಲಿ ಸಂಘಪರಿವಾರದ ಕಾರ್ಯಕರ್ತರಿಂದ ಹತ್ಯೆಯಾದ ಶಹೀದ್ ಶಮೀರ್ ಎಂಬ ಯುವಕನ ಮನೆಗೆ ಧಾರವಾಡ ಜಿಲ್ಲಾ ಮಹಾನಗರ ಕಾಂಗ್ರೆಸ್ ಸಮಿತಿಯ ನಿಯೋಗ ಭೇಟಿ ನೀಡಿ ಸಾಂತ್ವನ ಹೇಳಿ ಕುಟುಂಬಕ್ಕೆ ಧೈರ್ಯ ತುಂಬಿದರು.
ಅಂಜುಮನ್ ಪದಾಧಿಕಾರಿಗಳ ಜೊತೆ ಸೇರಿ ಪತ್ರಿಕಾಗೋಷ್ಠಿ ನಡೆಸಿ, ಈ ಪ್ರಕರಣವನ್ನು ಸಿಬಿಐ ಒಪ್ಪಿಸುವಂತೆ ಆಗ್ರಹಿಸಿದರು.

ಮೃತನ ಕುಟುಂಬಕ್ಕೆ ಸರಕಾರದಿಂದ 25ಲಕ್ಷ ರೂಪಾಯಿ ಗಳು ಧನ ಸಹಾಯ ನೀಡಬೇಕೆಂದು ಒತ್ತಾಯಿಸಿದರು.

ಸಂತ್ರಸ್ತ ಕುಟುಂಬಕ್ಕೆ ಕಾನೂನು ನೆರವಿನ ಭರವಸೆ ನೀಡಿದ ಕಾಂಗ್ರೆಸ್ ನಿಯೋಗ

ಕಾಂಗ್ರೆಸ್ ಪಕ್ಷದ ವತಿಯಿಂದ ಕುಟುಂಬಕ್ಕೆ ಕಾನೂನಿನ ನೆರವು ನೀಡುವ ಬಗ್ಗೆಯೂ ಆಶ್ವಾಸನೆ ನೀಡಿದರು.

ಇದೇ ಸಂಧರ್ಭದಲ್ಲಿ
ವಕೀಲರ ಸಂಘಕ್ಕೆ, ಸಮಾಜದಲ್ಲಿ ಕೋಮು ಸೌಹಾರ್ದತೆ ಹಾಗು ಶಾಂತಿಯನ್ನು ಭಂಗ ಮಾಡುವ ಸಂಘಪರಿವಾರದ ಕಾರ್ಯಕರ್ತರ ಪರವಾಗಿ ಕಾನೂನಿನ ನೆರವು ನೀಡಬಾರದು ಎಂದು ವಿನಂತಿಸಿದರು.

ವಿಶೇಷವಾಗಿ ಇದೇ ಸಂಧರ್ಭದಲ್ಲಿ ಪ್ರಕರಣದ ಬಗ್ಗೆ AIMIM ಹಾಗೂ PFI ಸಂಘಟನೆಯವರು ಪ್ರಚೋದನಕಾರಿ ಹೇಳಿಕೆ ನೀಡಿ ಗಲಭೆಗೆ ಪ್ರಚೋದಿಸುವ ಪ್ರಯತ್ನಿಸುವ ಸಾಧ್ಯತೆ ಇದ್ದು, ಈ ಬಗ್ಗೆ ಅದಕ್ಕೆ ಜನರು ಹೆಚ್ಚಿನ ಮಹತ್ವ ನೀಡದೆ, ಕಾನೂನಿನ ಚೌಕಟ್ಟಿನಲ್ಲಿ ನ್ಯಾಯ ಪಡೆಯೋಣ ಎಂದು ಸರ್ವರಿಗೂ ಮನವಿ ಮಾಡಿಕೊಂಡರು.

ಈ ಸಂಧರ್ಭದಲ್ಲಿ ಮಹಾನಗರ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರಾದ ಶ್ರೀ ಅಲ್ತಾಫ್ ಹಳ್ಳೂರ್, ಶಾಹ್ಝಮಾನ್ ಮುಜಾಹಿದ್, ನಾಗರಾಜ ಗೌರಿ, ಪ್ರಕಾಶ್ ಕುರಹಟ್ಟಿ ಸೇರಿದಂತೆ ಅನೇಕ ಮುಖಂಡರು ಉಪಸ್ಥಿತರಿದ್ದರು.

Share this on:
error: Content is protected !!