Latest Posts

ಉತ್ತರಾಖಂಡ ರಾಜಕೀಯದಲ್ಲಿ ಮಹಾ ಸ್ಪೋಟಕ ತಿರುವು.?!!

ಬಿಜೆಪಿಗೆ ರಾಜಿನಾಮೆ ನೀಡಲು ಮುಂದಾದ ಹಾಲಿ, ಮಾಜಿ ಶಾಸಕರು ಸಹಿತ ಹಲವು ಪ್ರಭಾವಿ ನಾಯಕರು.

ಶೀಘ್ರದಲ್ಲೇ ಕಾಂಗ್ರೆಸ್ ಸೇರ್ಪಡೆ ಸಾಧ್ಯತೆ.

ಉತ್ತರಾಖಂಡ: ಉಚ್ಚಾಟಿತ ಬಿಜೆಪಿ ನಾಯಕ ಹಾಗೂ ರಾಜ್ಯದ ಮಾಜಿ ಸಚಿವ ಹರಕ್ ಸಿಂಗ್ ರಾವತ್ ಹಾಗೂ ಬೆಂಬಲಿಗರು ಕಾಂಗ್ರೆಸ್ ಸೇರ್ಪಡೆಯಾದ ಬೆನ್ನಲ್ಲೇ ಇದೀಗ ಹಾಲಿ, ಮಾಜಿ ಶಾಸಕರ ಸಹಿತ ಹಲವು ಪ್ರಭಾವಿ ಬಿಜೆಪಿ ನಾಯಕರು ಬಿಜೆಪಿ ಪಕ್ಷಕ್ಕೆ ರಾಜಿನಾಮೆ ನೀಡಲು ಮುಂದಾಗಿದ್ದು, ಶೀಘ್ರದಲ್ಲೇ ಕಾಂಗ್ರೆಸ್ ಸೇರ್ಪಡೆಯಾಗುವ ಸಾಧ್ಯತೆ ಇದೆ ಎನ್ನಲಾಗಿದೆ.
ಇದರೊಂದಿಗೆ ಮತ್ತೆ ಅಧಿಕಾರಕ್ಕೇರುವ ಬಿಜೆಪಿಯ ಕನಸು ಬಹುತೇಕ ನುಚ್ಚುನೂರಾಗಲಿದ್ದು, ಕಾಂಗ್ರೆಸ್ ಪಾಳಯದಲ್ಲಿ ಅಧಿಕಾರ ಹಿಡಿಯುವ ಭರವಸೆ ಹಿಮ್ಮಡಿ ಗೊಳಿಸಿದೆ ಎಂದು ಅಭಿಪ್ರಾಯ ವ್ಯಕ್ತವಾಗುತ್ತಿದೆ.
ಇದರಿಂದ ಮುಂದಿನ ದಿನಗಳಲ್ಲಿ ಅಲ್ಲಿನ ರಾಜಕೀಯದ ಚಿತ್ರಣ ಸಂಪೂರ್ಣ ಬದಲಾಗುವ ಸಾಧ್ಯತೆ ಬಗ್ಗೆ ರಾಜಕೀಯ ವಿಶ್ಲೇಷಕರು ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದಾರೆ.

Share this on:
error: Content is protected !!