ಬೆಂಗಳೂರು: ಮೂಡಬಿದಿರೆಯ ಆಳ್ವಾಸ್ ಕಾಲೇಜಿನ MD (Physiotherapy) ವಿಭಾಗದ ವಿಧ್ಯಾರ್ಥಿನಿಯಾದ ದಕ್ಷಿಣ ಕನ್ನಡ ಜಿಲ್ಲೆಯ ಗುರುಪುರದ ಡಾ.ಲಿಫಾಮ್ ರೋಷನಾರ ಅವರು ಬೆಂಗಳೂರಿನ ಪ್ರತಿಷ್ಠಿತ ರಾಜೀವ್ ಗಾಂಧಿ ಆರೋಗ್ಯ ವಿಶ್ವವಿದ್ಯಾಲಯದಲ್ಲಿ ನಡೆದ ಆಯುರ್ವೇದ MD (Physiotherapy) ಪರೀಕ್ಷೆಯಲ್ಲಿ ರಾಜ್ಯಕ್ಕೆ ಮೊದಲ ಶ್ರೇಣಿಯಲ್ಲಿ ಉತ್ತೀರ್ಣರಾಗಿ ಕೀರ್ತಿ ಪತಾಕೆಯನ್ನು ಹಾರಿಸುವ ಮೂಲಕ ದಕ್ಷಿಣ ಕನ್ನಡ ಜಿಲ್ಲೆಗೆ, ತನ್ನ ಸಮುದಾಯಕ್ಕೆ ಹೆಮ್ಮೆ ತಂದಿದ್ದಾರೆ.

ಕಳೆದ 2021 ನವೆಂಬರ್ ತಿಂಗಳಲ್ಲಿ ನಡೆದ ಪರೀಕ್ಷೆಯಲ್ಲಿ ಅತಿ ಹೆಚ್ಚು 656 ಅಂಕಗಳನ್ನು ಪಡೆಯುವ ಮೂಲಕ ಚಿನ್ನದ ಪದಕ ಗಳಿಸುವುದರೊಂದಿಗೆ ಸಾಧನೆಗೈದಿದ್ದಾರೆ.
ಇವರು ಗುರುಪುರದ ಉದ್ಯಮಿ ಯಾಕೂಬ್ ಹಾಗೂ ಸಲೀಖಾ ದಂಪತಿಗಳ ಪುತ್ರಿ ಮತ್ತು ನ್ಯಾಯವಾದಿ ಆಯೆಷಾ ಜಹಾನಾರಾಳ ತಂಗಿಯಾಗಿರುತ್ತಾರೆ.