ಅಸ್ಸಾಂ: ಗುವಾಹಟಿಯಲ್ಲಿರುವ ಪಕ್ಷದ ಕಚೇರಿಯಲ್ಲಿ ಅಸ್ಸಾಂ ಪ್ರದೇಶ ಕಾಂಗ್ರೆಸ್ ಸಮಿತಿ (ಎಪಿಸಿಸಿ) ಭೂಪೇನ್ ಕುಮಾರ್ ಬೋರಾ, ಸಂಸದ ಪ್ರದ್ಯುತ್ ಬೊರ್ಡೊಲೊಯ್ ಮತ್ತು ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕ ದೇಬಬ್ರತ ಸೈಕಿಯಾ ಅವರ ಸಮ್ಮುಖದಲ್ಲಿ 18 ಮಂದಿ ಬಿಜೆಪಿ ನಾಯಕರು ಇಂದು ಕಾಂಗ್ರೆಸ್ಗೆ ಸೇರ್ಪಡೆಗೊಂಡರು.
ರಾಜ್ಯಾದ್ಯಂತ ವಿವಿಧ ಕಾಲೇಜುಗಳು ಮತ್ತು ವಿಶ್ವವಿದ್ಯಾನಿಲಯಗಳಲ್ಲಿ ಇತ್ತೀಚೆಗೆ ನಡೆದ ವಿದ್ಯಾರ್ಥಿ ಸಂಘದ ಚುನಾವಣೆಯಲ್ಲಿ ಕಾಂಗ್ರೆಸ್ನ ವಿದ್ಯಾರ್ಥಿ ಘಟಕ, ನ್ಯಾಷನಲ್ ಸ್ಟೂಡೆಂಟ್ಸ್ ಯೂನಿಯನ್ ಆಫ್ ಇಂಡಿಯಾ (ಎನ್ಎಸ್ಯುಐ) ಅಭ್ಯರ್ಥಿಗಳು ಗರಿಷ್ಠ ಹುದ್ದೆಗಳನ್ನು ಗೆದ್ದಿದ್ದಾರೆ ಎಂದು ಭೂಪೇನ್ ಕುಮಾರ್ ಬೋರಾ ಇದೇ ಸಮಯ ತಿಳಿಸಿದರು.

ಪ್ರಸ್ತುತ ಬಿಜೆಪಿ ನೇತೃತ್ವದ ಸರ್ಕಾರದ ಅಸಫಲತೆ,ವೈಫಲ್ಯದಿಂದಾಗಿ ಯುವಕರು, ರಾಜ್ಯದ ಜನರು ಸಂತೋಷವಾಗಿಲ್ಲ.ಇದರ ಪರಿಣಾಮವೇ ಇಂದು ರಾಜ್ಯದ ವಿವಿಧ ಭಾಗಗಳಿಂದ 18 ಮಂದಿ ಬಿಜೆಪಿ ನಾಯಕರು ಕಾಂಗ್ರೆಸ್ಗೆ ಸೇರ್ಪಡೆಯಾಗಿದ್ದಾರೆ ಎಂದು ಭೂಪೇನ್ ಕುಮಾರ್ ಬೋರಾ ಹೇಳಿದರು.
ಏತನ್ಮಧ್ಯೆ, ಎಪಿಸಿಸಿ ನೇತಾಜಿ ಸುಭಾಷ್ ಚಂದ್ರ ಬೋಸ್ ಅವರ 125 ನೇ ಜನ್ಮದಿನವನ್ನು ಭಾನುವಾರ ಆಚರಿಸಿತು. ನೇತಾಜಿ ಅವರ ಭಾವಚಿತ್ರಕ್ಕೆ ಕಾಂಗ್ರೆಸ್ ಮುಖಂಡರು ಪುಷ್ಪ ನಮನ ಸಲ್ಲಿಸಿದರು.