Latest Posts

ಹಿಜಾಬ್ ವಿಚಾರವಾಗಿ ವಿವಾದಾತ್ಮಕ ಹೇಳಿಕೆ ಹಿನ್ನೆಲೆ:

ಕಾರ್ಯಕರ್ತರ ತೀವ್ರ ಆಕ್ರೋಶಕ್ಕೆ ಗುರಿಯಾಗಿದ್ದ ಯುವ ಕಾಂಗ್ರೆಸ್ ರಾಷ್ಟ್ರೀಯ ವಕ್ತಾರೆ ಸುರಯ್ಯ ಅಂಜುಮ್ ಗೆ ಶೋಕಾಸ್ ನೋಟಿಸ್.!?

ದೆಹಲಿ: ಹಿಜಾಬ್ ವಿಚಾರವಾಗಿ ಕಾಂಗ್ರೆಸ್ ಪಕ್ಷದ ಬಹುತೇಕ ನಾಯಕರು ಗಟ್ಟಿಯಾಗಿ ಧ್ವನಿ ಎತ್ತಿದ್ದು, ಈ ನಡುವೆ ಇತ್ತೀಚೆಗಷ್ಟೇ ಯುವ ಕಾಂಗ್ರೆಸ್ ರಾಷ್ಟ್ರೀಯ ವಕ್ತಾರೆಯಾಗಿ ಆಯ್ಕೆಯಾಗಿರುವ ಸುರಯ್ಯ ಅಂಜುಮ್ ಅವರು ಫೇಸ್‌ಬುಕ್‌ ಲೈವ್ ಮೂಲಕ ಹಾಗೂ ಪಕ್ಷದ ಶಿಷ್ಟಾಚಾರಗಳನ್ನು ಗಾಳಿಗೆ ತೂರಿ ಮಾಧ್ಯಮಗಳಲ್ಲಿ ಹಿಜಾಬ್ ವಿರುದ್ಧವಾಗಿ ಬೇಕಾಬಿಟ್ಟಿ ಹೇಳಿಕೆ ನೀಡುತ್ತಿರುವ ಬಗ್ಗೆ ಕಾರ್ಯಕರ್ತ ವಲಯದಲ್ಲಿ ತೀವ್ರ ಆಕ್ರೋಶಕ್ಕೆ ಒಳಗಾಗಿದ್ದರು.

ಏತನ್ಮಧ್ಯೆ ಕಾರ್ಯಕರ್ತರು ರಾಷ್ಟ್ರೀಯ ನಾಯಕರಿಗೆ ಸರಣಿ ಟ್ವೀಟ್ ಮಾಡುವ ಮೂಲಕ ಅವರನ್ನು ಪಕ್ಷದಿಂದ ಕೂಡಲೇ ಉಚ್ಚಾಟನೆ ಮಾಡುವಂತೆಯೂ ಆಗ್ರಹಿಸಿದ್ದರು.
ಇದೀಗ ವಿವಾದದ ಬಗ್ಗೆ ಯುವ ಕಾಂಗ್ರೆಸ್ ಅಧ್ಯಕ್ಷರಾದ ಬಿ.ವಿ.ಶ್ರೀನಿವಾಸ್ ಅವರು ರಾಷ್ಟ್ರೀಯ ವಕ್ತಾರೆ ಸುರಯ್ಯ ಅಂಜುಮ್ ಅವರಿಗೆ ವಿವರಣೆ ಕೇಳಿ ಶೋಕಾಸ್ ನೋಟಿಸ್ ಜಾರಿ ಮಾಡಿರುವ ಬಗ್ಗೆ ಬಲ್ಲ ಮೂಲಗಳಿಂದ ಮಾಹಿತಿ ಬಂದಿರುತ್ತದೆ.
ಅಧೀಕೃತ ಮಾಹಿತಿ ಇನ್ನಷ್ಟೇ ಹೊರಬರಬೇಕಿದೆ.

Share this on:
error: Content is protected !!