ದೆಹಲಿ: ಕಾಲೇಜಿನಲ್ಲಿ ‘ಹಿಜಾಬ್’ ಧರಿಸುವ ವಿವಾದ ಕರ್ನಾಟಕದಲ್ಲಿ ಭುಗಿಲೆದ್ದಿರುವಂತೆಯೇ, ಕೇರಳದ ಕಾಂಗ್ರೆಸ್ ಸಂಸದ ಟಿ.ಎನ್ ಪ್ರತಾಪನ್ ಸೋಮವಾರ ಲೋಕಸಭೆಯಲ್ಲಿ ಈ ವಿಷಯ ಪ್ರಸ್ತಾಪಿಸಿ, ಮುಸ್ಲಿಂ ಮಹಿಳೆಯರ ಹಿಜಾಬ್ “ಹಿಂದೂಗಳಿಗೆ ಮಂಗಳಸೂತ್ರ, ಕ್ರಿಶ್ಚಿಯನ್ನರ ಶಿಲುಬೆ ಮತ್ತು ಸಿಖ್ಖರ ಪೇಟ ಇದ್ದ ಹಾಗೆ ಆದುದರಿಂದ ಹಿಜಾಬ್ ತೊಡುವ ಹಕ್ಕನ್ನು ಕಸಿದುಕೊಳ್ಳಬೇಡಿ “ಎಂದು ಆಗ್ರಹಿಸಿದರು.
“ಹುಡುಗಿಯರು ತರಗತಿಯ ಹೊರಗೆ ಕುಳಿತು ತಮ್ಮ ಮೂಲಭೂತ ಹಕ್ಕುಗಳನ್ನು ಕೇಳುತ್ತಿದ್ದಾರೆ. ಹಿಜಾಬ್ ಎಂಬುವುದು ಹುಡುಗಿಯರ ಸಾಂಸ್ಕೃತಿಕ ಮತ್ತು ಧಾರ್ಮಿಕ ಗುರುತಿನ ಒಂದು ಭಾಗವಾಗಿದೆ. ಇದು ಹಿಂದೂಗಳಿಗೆ ಮಂಗಳಸೂತ್ರ, ಕ್ರಿಶ್ಚಿಯನ್ನರಿಗೆ ಶಿಲುಬೆ ಮತ್ತು ಸಿಖ್ಖರಿಗೆ ಪೇಟಗಳಿದ್ದಂತೆ” ಎಂದು ಟಿ.ಎನ್ ಪ್ರತಾಪನ್ ಶೂನ್ಯ ವೇಳೆಯಲ್ಲಿ ಪ್ರಸ್ತಾಪಿಸಿದರು.
ಈ ದೇಶದಲ್ಲು ಸಿಖ್ಖರು ಪೇಟ ಧರಿಸಿ ಸರ್ಕಾರದ ವಿರುದ್ಧ ಪ್ರತಿಭಟನೆ ನಡೆಸುವುದನ್ನು ಕಂಡರೆ ಅವರನ್ನು ‘ಖಾಲಿಸ್ತಾನಿ’ ಎಂದು ಕರೆಯುವ ಪ್ರವೃತ್ತಿ ಮುಂದುವರೆದಿದೆ. ಶಿಲುಬೆಯನ್ನು ಧರಿಸಿರುವ ವ್ಯಕ್ತಿಯನ್ನು ಕಂಡರೆ ಅವರ ಮೇಲೆ ದಾಳಿ ನಡೆಸಲಾಗುತ್ತಿದೆ. ಇವತ್ತು
ಮುಸ್ಲಿಂ ಯುವತಿ ಹಿಜಾಬ್ ಧರಿಸಿರುವುದನ್ನು ಕಂಡರೆ ಅವರ ಶಿಕ್ಷಣ ಮೊಟಕುಗೊಳಿಸಲು ಹಿಜಾಬ್ ತೊಡುವುದನ್ನು ತಡೆಯಲಾಗುತ್ತಿದೆ.
ನಮ್ಮ ಭವ್ಯ ಭಾರತವನ್ನು ಇವರು ಎತ್ತ ಕೊಂಡೊಯ್ಯುತ್ತಿದ್ದಾರೆ? ನಮ್ಮ ದೇಶದ ವೈವಿಧ್ಯತೆಯಲ್ಲಿರುವ ಏಕತೆಯನ್ನು ಕಸಿಯಲು ಯಾರಿಂದಲೂ ಸಾಧ್ಯವಿಲ್ಲ. ಈ ಹೆಣ್ಣುಮಕ್ಕಳ ಸಾಂವಿಧಾನಿಕ ಹಕ್ಕುಗಳನ್ನು ಖಚಿತಪಡಿಸಿಕೊಳ್ಳಲು ಶಿಕ್ಷಣ ಸಚಿವರು ಈ ವಿಷಯದಲ್ಲಿ ಮಧ್ಯ ಪ್ರವೇಶಿಸಿ ನ್ಯಾಯ ಒದಗಿಸಬೇಕು ಎಂದು ನಾನು ವಿನಂತಿಸುತ್ತೇನೆ. ಆಗ ಮಾತ್ರ ಅದು ನಿಜವಾದ “ಸಬ್ಕಾ ಸಾಥ್, ಸಬ್ಕಾ ವಿಕಾಸ್’’ ಎಂದು ಅವರು ಕೇಂದ್ರ ಸರಕಾರಕ್ಕೆ ಚಾಟಿ ಬೀಸಿದರು.
ಹಿಂದೂಗಳ ಮಂಗಳಸೂತ್ರ, ಕ್ರಿಶ್ಚಿಯನ್ನರ ಶಿಲುಬೆ, ಸಿಕ್ಖರು ಪೇಟ ತೊಡುವ ಹಾಗೆಯೇ ಮುಸ್ಲಿಮರಿಗೆ ಹಿಜಾಬ್.!
ಹಿಜಾಬ್ ಪರವಾಗಿ ಲೋಕಸಭೆಯಲ್ಲಿ ಘರ್ಜಿಸಿದ ಕೇರಳ ಕಾಂಗ್ರೆಸ್ ಸಂಸದ ಟಿ.ಎನ್ ಪ್ರತಾಪನ್
