Latest Posts

SKSSF UAE ಕರ್ನಾಟಕ ರಾಜ್ಯ ಸಮಿತಿ ವತಿಯಿಂದ ಹಮೀದ್ ಅಲೀ ಶಿಹಾಬ್ ತಂಙಳ್ ರವರಿಗೆ ಸನ್ಮಾನ, ಬಡ ಕುಟುಂಬದ ಮನೆ ನಿರ್ಮಾಣಕ್ಕೆ ನೆರವು

ಎಸ್ಕೆಎಸ್ಸೆಸೆಫ್ ಕೇಂದ್ರ ಸಮಿತಿ ವತಿಯಿಂದ ಅಸ್ತಿತ್ವ, ಹಕ್ಕು ಯುವ ಜನತೆ ಮರಳಿ ಪಡೆಯುತ್ತಿದೆ ಎಂಬ ಧ್ಯೆಯ ವಾಕ್ಯದೊಂದಿಗೆ ‘ಮುನ್ನಡೆ ಯಾತ್ರೆ’ ಯು ತಿರುವನಂತಪುರಂ ನಿಂದ ಆರಂಭ ಗೊಂಡು ದ.ಕ.ಜಿಲ್ಲೆಯ ಪುತ್ತೂರಿನಲ್ಲಿ ಸಮಾರೋಪ ಗೊಂಡಿದ್ದು, ಈ ‘ಮುನ್ನಡೆ ಯಾತ್ರೆ’ ಯ ಸಾರಥ್ಯ ವಹಿಸಿದ ಎಸ್ಕೆಎಸ್ಸೆಸೆಫ್ ಅಧ್ಯಕ್ಷರಾದ ಪಾಣಕ್ಕಾಡ್ ಸಯ್ಯಿದ್ ಹಮಿದಲಿ ಶಿಹಾಬ್ ತಂಙಳ್ ರವರನ್ನು ಜನವರಿ 11 ರಂದು ಉಳ್ಳಾಲದಲ್ಲಿ ನಡೆದ ಸಮಾರಂಭದಲ್ಲಿ ಅನಿವಾಸಿ ಕನ್ನಡಿಗ ಸುನ್ನೀ ಸಂಘಟನೆಯಾದ ಎಸ್ಕೆಎಸ್ಸೆಸೆಫ್ ಯುಎಇ ಕರ್ನಾಟಕ ರಾಜ್ಯ ಸಮಿತಿ ವತಿಯಿಂದ ಸ್ಮರಣಿಕೆ ನೀಡಿ ಗೌರವಿಸಲಾಯಿತು
ಎಸ್ಕೆಎಸ್ಸೆಸೆಫ್ ಯುಎಇ ಕರ್ನಾಟಕ ರಾಜ್ಯ ಸಮಿತಿಯ ಕಾರ್ಯಧ್ಯಕ್ಷ ರಫೀಕ್ ಆತೂರು, ಸಂಘಟನಾ ಕಾರ್ಯದರ್ಶಿ ಅಶ್ರಫ್ ಪರ್ಲಡ್ಕ , ವಿಖಾಯದ ನಿಝಾಮ್ ತೋಡಾರ್ ಮೊದಲಾದವರು ಸಯ್ಯದರಿಗೆ ಸ್ಮರಣಿಕೆ ನೀಡಿ ಗೌರವಿಸಿದರು.
ಇದೇ ಸಂದರ್ಭ ಬಡ ಕುಟುಂಬವೊಂದರ ಮನೆ ನಿರ್ಮಾಣಕ್ಕೆ ಸಮಿತಿಯ ವತಿಯಿಂದ ಐವತ್ತು ಸಾವಿರ ರೂಪಯಿಯ ಚೆಕ್ ವಿತರಿಸಲಾಯಿತು. ಪಾಣಕ್ಕಾಡ್ ಹಮೀದಲೀ ಶಿಹಾಬ್ ತಂಙಳ್ ರವರು ಸಮಸ್ತ ವಿದ್ಯಾಭ್ಯಾಸ ಬೋರ್ಡ್ ಸದಸ್ಯ ಅಬ್ದುರ್ರಶೀದ್ ಹಾಜಿ ಪರ್ಲಡ್ಕ ಅವರಿಗೆ ಚೆಕ್ ಹಸ್ತಾಂತರಿಸಿದರು. ಈ ಸಂದರ್ಭದಲ್ಲಿ ಶಾಸಕ ಯು.ಟಿ.ಖಾದರ್, ಉಳ್ಳಾಲ ಸಯ್ಯಿದ್ ಮದನಿ ದರ್ಗಾ ಅಧ್ಯಕ್ಷ ಅಬ್ದುರ್ರಶೀದ್ ಹಾಜಿ, ಪ್ರಾಂಶುಪಾಲ ಉಸ್ಮಾನುಲ್ ಫೈಝಿ , ‘ ಮನ್ನಡೆ ಯಾತ್ರೆ’ ಉಳ್ಳಾಲ ಸ್ವಾಗತ ಸಮಿತಿ ಅಧ್ಯಕ್ಷ ಮುಸ್ತಫಾ ಉಳ್ಳಾಲ, ಹಾರೂನ್ ಅಹ್ಸನಿ ಹಾಗೂ ಮುನ್ನಡೆ ಯಾತ್ರೆಯಲ್ಲಿದ್ದ ಎಸ್ಕೆಎಸ್ಸೆಸೆಫ್ ಕೇಂದ್ರೀಯ ನಾಯಕರು ಹಾಗೂ ಹಲವಾರು ಗಣ್ಯ ವ್ಯಕ್ತಿಗಳು ಉಪಸ್ಥಿರಿದ್ದರು.
ಎಸ್ಕೆಎಸ್ಸೆಸೆಫ್ ಯುಎಇ ಕರ್ನಾಟಕ ರಾಜ್ಯ ಸಮಿತಿಯು ಮತ್ತು ವಿಖಾಯದ ವತಿಯಿಂದ ವಿವಾಹ, ಮನೆ ನಿರ್ಮಾಣ, ಚಿಕಿತ್ಸೆಗೆ ನೆರವು ಹಾಗೂ ಕೋವಿಡ್-19 ಲಾಕ್ ಡೌನ್ ಸಂದರ್ಭದಲ್ಲಿ ಯು.ಎ.ಇ.ಯಲ್ಲಿ ಸಂಕಷ್ಟದಲ್ಲಿದ್ಷ ಅನಿವಾಸಿ ಕನ್ನಡಿಗರಿಗರನ್ನು ಚಾರ್ಟರ್ ಫ್ಲೈಟ್ ಮೂಲಕ ಊರಿಗೆ ಕರೆ ತರುವ ವ್ಯವಸ್ಥೆಯನ್ನು ಮಾಡಲಾಗಿತ್ತು ಹಾಗೂ ಇತ್ತೀಚಿಗೆ ದುಬೈ ಮೂಲಕ ಸೌದಿಗೆ ತೆರಲುತ್ತಿದ್ದ ಅನಿವಾಸಿ ಕನ್ನಡಿಗರಿಗೆ ಕೋರೈಂಟಿನ್ ವ್ಯವಸ್ಥೆಯನ್ನು ಮಾಡಿ ಕೊಡಲಾಗಿತು. ಹೀಗೆ ವಿವಿಧ ಸೇವಾ ಕಾರ್ಯದಲ್ಲಿ ಸದಾ ತೊಡಗಿಸಿ ಕೊಂಡಿದ್ದು ಮುನ್ನಡೆ ಯಾತ್ರೆ ಸಮಾರೋಪ ಸಮಾರಂಭದ ಪ್ರಯುಕ್ತ ದ.ಕ.ಜಿಲ್ಲೆಯ ಉಳ್ಳಾಲ, ಮಿತ್ತಬೈಲು ಮತ್ತು ಪುತ್ತೂರಿನ ಸಂಪ್ಯದಲ್ಲಿ ನಡೆದ ಈ ಮೂರು ಕಾರ್ಯಕ್ರಮಕ್ಕೆ ತಲಾ ಐದು ಸಾವಿರ ರೂಪಾಯಿ ಯಂತೆ ನೀಡಲಾಯಿತು ಎಂದು ಸಮಿತಿಯ ಪ್ರಕಟಣೆ ತಿಳಿಸಿದೆ.

Share this on:
error: Content is protected !!