ಹೈದರಾಬಾದ್: ಮುಸ್ಲಿಂ ಡೆಲಿವರಿ ಬಾಯ್ ಕೈಯಿಂದ ಆಹಾರವನ್ನು ಪಡೆದುಕೊಳ್ಳಲ್ಲ ಎಂದು ಆರ್ಡರ್ ಕ್ಯಾನ್ಸಲ್ ಮಾಡಿದ ವಿದ್ಯಮಾನಗಳ ನಡುವೆ ಸೈಕಲ್ ನಲ್ಲಿ ಆಹಾರವನ್ನು ಡೆಲಿವರಿ ಮಾಡುತಿದ್ದ ಝೋಮ್ಯಾಟೋ ಡೆಲಿವರಿ ಬಾಯ್ ಮುಸ್ಲಿಂ ಯುವಕ ಅಕೀಲ್ ಗೆ ಚಂದಾ ಎತ್ತಿ ಬೈಕ್ ಖರೀದಿಸಿಕೊಟ್ಟ ಹಿಂದೂ ಸಹೋದರ ಮುಖೇಶ್.
ಹೈದರಾಬಾದ್ ನ ಕಿಂಗ್ ಕೋಟಿ ಪ್ರದೇಶದಲ್ಲಿನ ರಾಬಿನ್ ಮುಖೇಶ್ ಎಂಬ ಯುವಕ ಝೋಮ್ಯಾಟೊದಲ್ಲಿ ಫುಡ್ ಆರ್ಡರ್ ಮಾಡಿದ ಕೇವಲ 20 ನಿಮಿಷದಲ್ಲಿ ಅವರ ಕೈಗೆ ಆಹಾರ ಬಂದು ಸೇರುತ್ತದೆ ಈ ಬಗ್ಗೆ ಯುವಕನಲ್ಲಿ ವಿಚಾರಿಸಿದಾಗ ತಾನು 3 ನೇ ವರ್ಷದ ಇಂಜಿನಿಯರಿಂಗ್ ವಿದ್ಯಾರ್ಥಿಯಾಗಿದ್ದು ಪಾರ್ಟ್ ಟೈಮ್ ಝೋಮಟೋದಲ್ಲಿ ಕೆಲಸ ಮಾಡಿ ತನ್ನ ತಂದೆ ತಾಯಿಯನ್ನು ಸಾಕುತಿದ್ದು ಬಡ ಕುಟುಂಬದವನಾಗಿದ್ದರಿಂದ ತನ್ನಲ್ಲಿ ಬೈಕ್ ಖರೀದಿಸಲು ಹಣವಿಲ್ಲ ಆ ಕಾರಣಕ್ಕಾಗಿ ಕಳೆದೊಂದು ವರ್ಷದಿಂದ ಸೈಕಲ್ ನಲ್ಲಿ ಡೆಲಿವರಿ ಕೆಲಸ ಮಾಡುತ್ತಿದ್ದುದ್ದನ್ನು ತಿಳಿಸಿದನು.
ಈ ವಿಷಯ ಕೇಳಿ ಮನಸೂರೆಗೊಂಡ ಮುಕೇಶ್ ಅವರು ತನ್ನ ಗೆಳೆಯರ ಬಳಗವನ್ನು ಸಂಪರ್ಕಿಸಿ ಸಾಮಾಜಿಕ ಜಾಲತಾಣದ ಮೂಲಕ ಚಂದಾ ಎತ್ತಿ ಅಕೀಲ್ ಗೆ ಹೊಸ ಬೈಕ್ ಖರೀದಿಸಿ ಕೊಟ್ಟರು . ಇಂತಹ ಸೌಹಾರ್ದತಾ ಸಂಬಂಧಗಳಿಂದಲೇ ಈ ದೇಶದಲ್ಲಿ ಕೋಮು ಸೌಹಾರ್ದತೆ ಜೀವಂತವಾಗಿದೆ