Latest Posts

ಗ್ರಾಮ ಪಂಚಾಯತ್ ಚುನಾವಣೆಯಲ್ಲಿ ಅವಕಾಶ ಸಿಕ್ಕಿದರೆ ಸ್ಪರ್ಧೆ;ನಮ್ಮ ಸಾಮಾಜಿಕ‌ ಸೇವೆ ಕೇವಲ ಚುನಾವಣಾ ಲಾಭಕೋಸ್ಕರ ಆಗಬಾರದು ಜಿ.ಎ ಶಂಸುದ್ದೀನ್ ಅಜ್ಜಿನಡ್ಕ ಅಭಿಮತ

ವಿಟ್ಲ: ಮುಂಬರಲಿರುವ ಗ್ರಾಮ ಪಂಚಾಯತ್ ಚುನಾವಣೆಯಲ್ಲಿ ನಮ್ಮ ಪಕ್ಷ ಅವಕಾಶ ನೀಡಿದರೆ ಸ್ಪರ್ಧೆ ಹೊರತು ಬೇರೆ ಯಾವುದೇ ರೀತಿಯಲ್ಲಿ ಸ್ಪರ್ಧೆ ಮಾಡುವ ಅವಕಾಶ ಇಂಗಿತ ನನಗಿಲ್ಲ ಎಂದು ಸಾಮಾಜಿಕ ಕಾರ್ಯಕರ್ತ ಜಿ.ಎ ಶಂಸುದ್ದೀನ್ ಅಜ್ಜಿನಡ್ಕ ಅವರು ತಿಳಿಸಿದ್ದಾರೆ.
ನಮ್ಮ ಸಾಮಾಜಿಕ‌ ಸೇವಾ ಕೆಲಸ ಕಾರ್ಯಗಳು ಕೇವಲ ಚುನಾವಣಾ ರಾಜಕೀಯ ಲಾಭಕೋಸ್ಕರ ಆಗಬಾರದು ಎಂದು ಪೀಪಲ್ಸ್ ವಿಷನ್ ಮಾಧ್ಯಮ ಜೊತೆ ತಮ್ಮ ಮಾಹಿತಿಯನ್ನು ಅಭಿವ್ಯಕ್ತಪಡಿಸಿದ್ದಾರೆ.

ಪುಣಚ ಗ್ರಾಮದಲ್ಲಿ ಒರ್ವ ಸಾಮಾಜಿಕ ಕಾರ್ಯಕರ್ತನಾಗಿ ಕೆಲಸ ಮಾಡುತ್ತಿದ್ದೇನೆ.
ನನ್ನ ಸಾಮಾಜಿಕ‌ ಸೇವೆಯಲ್ಲಿ ಜಾತಿ, ಧರ್ಮ, ರಾಜಕೀಯ , ಇವುಗಳನ್ನು ಬದಿಗೊತ್ತಿ ಸರ್ವ ಧರ್ಮದ ಜನರ ಸೇವೆಗಾಗಿ ಶಕ್ತಿ ಮೀರಿ ಕೆಲಸ ಮಾಡಿದ್ದೇನೆ ಇದರ ಬಗ್ಗೆ ಹೆಮ್ಮೆ ಇದೆ ಎಂದರು

ಮುಂಬರಲಿರುವ ಗ್ರಾಮ ಪಂಚಾಯತ್ ಚುನಾವಣೆಯಲ್ಲಿ ಅರ್ಹ ಅಭ್ಯರ್ಥಿಗಳು ಗುರುತಿಸಿ ಅವರನ್ನು ಆಯ್ಕೆ ಮಾಡಬೇಕು
ಚುನಾವಣಾ ವಿಚಾರ ಬರುವಾಗ ನಡೆಸುವ ರಾಜಕೀಯ ನಾಟಕ ಇವುಗಳನ್ನು ಮತದಾರರು ತಿರಸ್ಕರಿಸಬೇಕು ಎಂದರು.

ನಾನು ಯಾವತ್ತೂ ಕೂಡ ಸಮಾಜ ವರ್ಗದಲ್ಲಿ ಚುನಾವಣೆಗೆ ನಿಲ್ಲಬೇಕು ಅವಕಾಶ ಸಿಗಬೇಕು ಎಂದು ಸಾಮಾಜಿಕ ಕೆಲಸ ಮಾಡಿದವನಲ್ಲ ಜನಸಾಮಾನ್ಯರ ಸೇವೆಗಾಗಿ ಕೆಲಸ ಮಾಡಿದ್ದೇನೆ.
ಪಂಚಾಯತ್ ಚುನಾವಣೆಯಲ್ಲಿ ಅವಕಾಶ ಸಿಗಲಿ ಸಿಕ್ಕದೇ ಇರಲಿ ನನ್ನ ಸಾಮಾಜಿಕ ಸೇವೆ ನಿರಂತರವಾಗಲಿದೆ ಎಂದರು.

ರಾಜಕಾರಣದಲ್ಲಿ ಜನಪ್ರತಿನಿಧಿಗೆ ವಿಶೇಷ ಗೌರವ ಇದೆ ಇದರ ನಡುವೆ ಸಾಮನ್ಯ ಪ್ರತಿನಿಧಿಯಾಗಿ ಸಮಾಜ ವರ್ಗದಲ್ಲಿ ಕೆಲಸ ಮಾಡುವುದು ಅತ್ಯಂತ ಶ್ರೇಷ್ಟವಾಗಿದೆ
ರಾಜಕಾರಣಕ್ಕೆ ಬರುವಾಗ ದುಡ್ಡು ಮಾಡಬೇಕು ಅದು ಮಾಡಬೇಕು ಆಸ್ತಿ ಸಂಪತ್ತು ಮಾಡಬೇಕು ಎಂದು ಆಸೆ ಪಡುವವರ ಸಂಖ್ಯೆ ಹೆಚ್ಚುತ್ತಿದೆ
ಇಂತಹ ರಾಜಕಾರಣದಲ್ಲಿ ಹೆಚ್ಚು ಕಾಲ ಅಧಿಕಾರ ಪಡೆಯಲು ಸಾಧ್ಯವಿಲ್ಲ
ನಿಯತ್ತಿನ ರಾಜಕಾರಣಕ್ಕೆ ರಾಜಕಾರಣದಲ್ಲಿ ವಿಶೇಷ ಗೌರವ ಮೌಲ್ಯಗಳು ದೊರೆಯುತ್ತವೆ ಎಂದರು.

ಚುನಾವಣೆಗಳು ಬರುವ ಸಮಯದಲ್ಲಿ ರಾಜಕೀಯ ಇದು ಸರ್ವೆ ಸಾಮಾನ್ಯ ಚುನಾವಣೆ ಮುಗಿದ ನಂತರ ಎಲ್ಲರೂ ಒಂದಾಗಿ ಒಗ್ಗಟ್ಟಾಗಿ ಸೌಹರ್ದತೆಯನ್ನು ಉಳಿಸಲು ಪ್ರಯತ್ನ ಪಡುತ್ತಾರೆ.
ಈಗಾಗಿ ಗ್ರಾಮದ ಅಭಿವೃದ್ಧಿ ವಿಚಾರದಲ್ಲಿ ಹಸ್ತಕ್ಷೇಪ ಮಾಡದೇ ಪ್ರತಿಯೊಬ್ಬರು ಒಗ್ಗಟ್ಟಿನ ಮೂಲಕ ಕೆಲಸ ಮಾಡಬೇಕಾಗಿದೆ ಎಂದು ಹೇಳಿದರು.

Share this on:
error: Content is protected !!