Latest Posts

100ಕ್ಕೂ ಹೆಚ್ಚು ಯೋಧರನ್ನು ಬಲಿ ಪಡೆದ ಕೊರೋನಾ!!
ಸಾವಿರಾರು ಯೋಧರಿಗೆ ತಗುಲಿದ ಕೊರೋನಾ ಸೋಂಕು:
ಸಂಸತ್‌ಗೆ ಮಾಹಿತಿ ನೀಡಿದ ಗೃಹ ಇಲಾಖೆ

ದೆಹಲಿ: ಮಾನ್ಸೂನ್ ಅಧಿವೇಶನದಲ್ಲಿ ಸಭೆಗೆ ಮಾಹಿತಿ ನೀಡಿರುವ ಕೇಂದ್ರ ಗೃಹ ಇಲಾಖೆ, “ಕೇಂದ್ರ ಅರೆಸೈನಿಕ ಪಡೆಗಳಲ್ಲಿ 25 ಸಾವಿರಕ್ಕೂ ಹೆಚ್ಚು ಸೈನಿಕರಲ್ಲಿ ಕೊರೋನಾ ಸೋಂಕು ಪತ್ತೆಯಾಗಿದೆ ಎಂದು ಮಾಹಿತಿ ನೀಡಿದ್ದಾರೆ. ಕೇಂದ್ರ ಭದ್ರತಾ ಪಡೆಗಳಲ್ಲಿ 100ಕ್ಕೂ ಹೆಚ್ಚು ಸಿಬ್ಬಂದಿ ಈಗಾಗಲೇ ಕೊರೊನಾಗೆ ಬಲಿಯಾಗಿದ್ದಾರೆ. ಇದಲ್ಲದೆ, 8270 ಮಂದಿ ಸಿಆರ್‌ಪಿಎಫ್‌ ಹಾಗೂ 8083 ಮಂದಿ ಗಡಿ ಭದ್ರತಾ ಸೈನಿಕರು ಕೊರೋನಾ ಸೋಂಕಿಗೆ ತುತ್ತಾಗಿದ್ದಾರೆ” ಎಂದು ಮಾಹಿತಿ ನೀಡಿದ್ದು ಆಘಾತಕ್ಕೆ ಕಾರಣವಾಗಿದೆ.

ಇನ್ನೂ ಅಕ್ಟೋಬರ್‌ ವೇಳೆಗೆ ದೇಶದಲ್ಲಿ 1 ಕೋಟಿಗೂ ಅಧಿಕ ಜನರಿಗೆ ಕೊರೋನಾ ಸೋಂಕು ತಗಲುವ ಸಾಧ್ಯತೆ ಇದೆ ಎಂದೂ ಕೆಲವು ತಜ್ಞರು ಅಂದಾಜಿಸಿದ್ದಾರೆ. ಆದರೆ, ಕಳೆದ ಆರು ತಿಂಗಳ ಅವಧಿಯಲ್ಲಿ ಭಾರತೀಯ ಸೇನೆಯಲ್ಲಿ ಕೊರೋನಾ ಉಂಟು ಮಾಡಿರುವ ಆಘಾತದ ಕುರಿತು ಈ ವರೆಗೆ ಯಾವುದೇ ಮಾಹಿತಿ ಹೊರಬಿದ್ದಿರಲಿಲ್ಲ.ಆದರೆ, ಇಂದಿನ ದಿನಗಳಲ್ಲಿ ಭಾರತೀಯ ಸೇನೆಯಲ್ಲೂ ಸಹ ಮಾರಣಾಂತಿಕ ಕೊರೋನಾ ವೈರಸ್‌ ಆಘಾತವನ್ನುಂಟು ಮಾಡಿದೆ, ಹಲವರ ಪ್ರಾಣಕ್ಕೆ ಕುತ್ತಾಗಿದೆ ಎಂಬ ಸುದ್ದಿ ನಿಜಕ್ಕೂ ಆಘಾತಕಾರಿ.

Share this on:
error: Content is protected !!