ದೋಹಾ: ಪ್ಯಾಲೆಸ್ಟೈನ್ನೊಂದಿಗಿನ ಸಮಸ್ಯೆಗಳು ಬಗೆಹರಿಯುವವರೆಗೂ ಕತಾರ್ ಇಸ್ರೇಲ್ನೊಂದಿಗೆ ರಾಜತಾಂತ್ರಿಕ ಸಂಬಂಧವನ್ನು ಸ್ಥಾಪಿಸುವುದಿಲ್ಲ.ಇಸ್ರೇಲ್ ಜೊತೆ ರಾಜತಾಂತ್ರಿಕ ಸಂಬಂಧವನ್ನು ಸ್ಥಾಪಿಸುವಲ್ಲಿ ಕತಾರ್ ತನ್ನ ನೆರೆಹೊರೆಯವರೊಂದಿಗೆ ಸೇರಿಕೊಳ್ಳುವುದಿಲ್ಲ ಎಂದು ವಿದೇಶಾಂಗ ಸಚಿವಾಲಯದ ವಕ್ತಾರೆ ಲುಲುವಾ ಬಿಂತ್ ರಶೀದ್ ಅಲ್ ಖತೀರ್ ಹೇಳಿದ್ದಾರೆ.ಬ್ಲೂಮ್ಬರ್ಗ್ ಮಾಧ್ಯಮದ ಸಂದರ್ಶನದಲ್ಲಿ ಈ ಮಾತನ್ನು ಹೇಳಿದ್ದಾರೆ.
‘ಈ ಸಂಘರ್ಷದ ಮೂಲತತ್ವ ಪ್ಯಾಲೆಸ್ತೀನಿಯರ ಜೀವನ ಪರಿಸ್ಥಿತಿಯಾಗಿದೆ.ಅವರು ದೇಶವಿಲ್ಲದೆ ಕಠಿಣ ಸ್ಥಿತಿಯಲ್ಲಿ ಜೀವಿಸುತ್ತಿದ್ದಾರೆ.ಇದನ್ನು ಗಮನಿಸಬೇಕಾಗಿದೆ “ಎಂದು ಅವರು ಹೇಳಿದರು.
ಯುಎಇ ಮತ್ತು ಬಹ್ರೇನ್ ಇಸ್ರೇಲ್ನೊಂದಿಗೆ ರಾಜತಾಂತ್ರಿಕ ಸಂಬಂಧವನ್ನು ಅಮೆರಿಕದ ಮಧ್ಯಸ್ಥಿಕೆಯ ಮೂಲಕ ಸ್ಥಾಪಿಸುತ್ತಿದೆ. ಉಭಯ ದೇಶಗಳು ಮಂಗಳವಾರ ಇಸ್ರೇಲ್ ಜೊತೆ ರಾಜತಾಂತ್ರಿಕ ಒಪ್ಪಂದಕ್ಕೆ ಸಹಿ ಹಾಕಲಿವೆ. ಸಹಿ ಸಮಾರಂಭವು ಶ್ವೇತಭವನದಲ್ಲಿ ನಡೆಯಲಿದೆ.
ಯುಎಇ ವಿದೇಶಾಂಗ ಸಚಿವ ಶೇಖ್ ಅಬ್ದುಲ್ಲಾ ಬಿನ್ ಜಾ
ಝಾಯೆದ್ ಅಲ್ ನಹ್ಯಾನ್ ಮತ್ತು ಬಹ್ರೇನ್ ವಿದೇಶಾಂಗ ಸಚಿವ ಡಾ.ಅಬ್ದುಲ್ಲಾ ಲತೀಫ್ ಬಿನ್ ರಶೀದ್ ಅಲ್ ಸಯಾನಿ ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಅವರೊಂದಿಗೆ ಒಪ್ಪಂದಕ್ಕೆ ಸಹಿ ಹಾಕಲಿದ್ದಾರೆ. ಕೊಲ್ಲಿ ರಾಷ್ಟ್ರಗಳು ಇಸ್ರೇಲ್ ಜೊತೆ ಕೈಜೋಡಿಸುವುದು ಇದೇ ಮೊದಲು.