Latest Posts

ಅಲ್,ಬದ್ರಿಯಾ ಗಲ್ಫ್ ಗಾಯ್ಸ್ ಬೆಳಪು ವತಿಯಿಂದ ಸೆಪ್ಟೆಂಬರ್ 20ರಂದು ಬೆಳಪು ಗ್ರಾಮಸ್ಥರಿಗೆ ಉಚಿತ ಆಯುಶ್ಮಾನ್ ಕಾರ್ಡ್ ವಿತರಣೆ

ಕಾಪು: ಊರಿನ ಬಡಜನರ ಸಹಾಯಕ್ಕಾಗಿ ಹುಟ್ಟಿಕೊಂಡು, ಕಳೆದ 3 ವರ್ಷಗಳಲ್ಲಿ ಬೆಳಪು ಬದ್ರಿಯಾ ಜುಮಾ ಮಸೀದಿಗೆ ಸಂಪೂರ್ಣ ಸಹಕಾರ ನೀಡುತ್ತಾ, ಅಲ್ ಮದ್ರಸತುಲ್ ಬದ್ರಿಯಾ ಬೆಳಪು ಇದರ ವಿದ್ಯಾರ್ಥಿಗಳಿಗೆ ಸಮವಸ್ತ್ರ ವಿತರಿಸುತ್ತಾ, ಸರಿಸುಮಾರು 3 ಲಕ್ಷಕ್ಕೂ ಮಿಕ್ಕಿ ಸಹಕಾರ ನೀಡಿರುವ ಅಲ್ ಬದ್ರಿಯಾ ಗಲ್ಫ್ ಗಾಯ್ಸ್ ಬೆಳಪು ಇದರ 4ನೇ ವಾರ್ಷಿಕೋತ್ಸವದ ಅಂಗವಾಗಿ, ಬೆಳಪುವಿನ ಸರ್ವಧರ್ಮೀಯರಿಗೆ ಇದೇ ಬರುವ ತಾರೀಕು 20/9/2020 ರಂದು ಕೇಂದ್ರ ಸರಕಾರದ ಆಯುಶ್ಮಾನ್ ಕಾರ್ಡ್ ವಿತರಣೆ ನಡೆಯಲಿದೆ.


ಬೆಳಪು ಪಂಚಾಯತ್ ಕಟ್ಟಡದಲ್ಲಿರುವ ಡಿಜಿಟಲ್ ಸೇವಾಕೇಂದ್ರದಲ್ಲಿ ಬೆಳಿಗ್ಗೆ 9 ರಿಂದ
ಸಂಜೆ 5 ರವರೆಗೆ ನಡೆಯಲಿದ್ದು, ಸಾರ್ವಜನಿಕರು ಆಧಾರ್ ಕಾರ್ಡ್ ರೇಷನ್ ಕಾರ್ಡ್ ಪ್ರತಿ ಹಾಗೂ ಮೊಬೈಲ್ ನಂಬರ್ ದಾಖಲೆಯನ್ನು ತೆಗೆದುಕೊಂಡು ಬರಬೇಕು ಹಾಗೂ ಕಡ್ಡಾಯವಾಗಿ ಮಾಸ್ಕ್ ಧರಿಸಬೇಕೆಂದು ಅಲ್ ಬದ್ರಿಯಾ ಗಲ್ಫ್ ಗಾಯ್ಸ್ ಅಧ್ಯಕ್ಷರಾದ ಎಂ.ಎಸ್. ಮುಹಮ್ಮದ್ ಬೆಳಪು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Share this on:
error: Content is protected !!