Latest Posts

ರಾಜ್ಯ ಫೈಝೀಸ್ ರಬೀಹ್ ಕ್ಯಾಂಪೈನ್‌
ನಾಳೆ ಅಂಕೋಲದಲ್ಲಿ ಸಮಾರೋಪ ಕಾರ್ಯಕ್ರಮ

ಪುಣ್ಯ ಪ್ರವಾದಿಯ ಜನ್ಮ ದಿನದ ಅಂಗವಾಗಿ ಸಮಕಾಲೀನ ಸಮಸ್ಯೆಗಳಿಗೆ ಪ್ರವಾದಿ ಚರಿಯ ಪರಿಹಾರ ಎಂಬ ಕೇಂದ್ರೀಯ ವಿಷಯದಲ್ಲಿ ಪ್ರತಿಷ್ಠಿತ ಪೈಝೀಸ್ ಅಸೋಸಿಯೇಷನ್ ರಾಜ್ಯ ಸಮಿತಿಯು ಅಕ್ಟೋಬರ್ 19 ರಿಂದ ನವೆಂಬರ್ 14 ರವರೆಗೆ ಹಮ್ಮಿಕೊಂಡ ರಬೀಹ್ ಕ್ಯಾಂಪೈನ್ ನ ಸಮಾರೋಪ ಕಾರ್ಯಕ್ರಮವು ಉತ್ತರ ಕನ್ನಡ ಜಿಲ್ಲೆಯ ಅಂಕೋಲದ ಪ್ರಸಿದ್ಧ ಆಧ್ಯಾತ್ಮಿಕ ಸಂದರ್ಶನ ಕೇಂದ್ರವಾದ ಫತ್ಹುಲ್ಲಾಹಿಶಾಹ್ ಖಾದ್ರಿ ದರ್ಗಾ ಸಮೀಪ ನವಂಬರ್ 14 ರಂದು ನಡೆಯಲಿದೆ. ರಾಜ್ಯ ವ್ಯಾಪ್ತಿ ಆಯ್ದ 31 ಸ್ಥಳಗಳಲ್ಲಿ ಅಭಿಯಾನ ಕಾರ್ಯಕ್ರಮಗಳು ಯಶಸ್ವಿಯಾಗಿ ನಡೆದಿದ್ದು ಪ್ರವಾದಿ ಪ್ರೇಮಿಗಳಲ್ಲಿ ನವ ಹುರುಪನ್ನು ಮೂಡಿಸಿತ್ತು. ಪ್ರವಾದಿ ಚರ್ಯೆಯ ಅನುಷ್ಠಾನವನ್ನು ವ್ಯಾಪಕ ಗೊಳಿಸುವಂತೆ ಸಂದೇಶ ಭಾಷಣಗಳು ನಡೆದವು. ಪ್ರವಾದಿ ಪ್ರಕೀರ್ತನೆಗಳ ಮಜ್ಲಿಸ್ ಗಳು ನವ ಉಲ್ಲಾ ಸದಿಂದ ಜರುಗಿದವು. ನವಂಬರ್ 14 ರ ಶನಿವಾರದಂದು ಅಂಕೋಲದಲ್ಲಿ ನಡೆಯುವ ಸಮಾರೋಪ ಸಮಾರಂಭ ವು ಅಂದು ಬೆಳಿಗ್ಗೆ ಒಂಬತ್ತಕ್ಕೆ ಮಖಾಂ ಝಿಯಾರತ್ ನೊಂದಿಗೆ ಪ್ರಾರಂಭಗೊಳ್ಳಲಿದೆ. ಝಿಯಾರತ್ ನೇತೃತ್ವ ಹಾಗೂ ಕಾರ್ಯಕ್ರಮದ ಉದ್ಘಾಟನೆಯನ್ನು ಪ್ರಸಿದ್ಧ ಅಹ್ಲ್ ಬೈತ್ ಮನೆತನದ ಕುಂಬೋಳ್ ಅಸ್ಸಯ್ಯದ್ ಅಲಿ ತಂಙಲ್ ನೆರವೇರಿಸಲಿದ್ದಾರೆ. ರಾಜ್ಯ ಫೈಝೀಸ್ ಅಧ್ಯಕ್ಷರಾದ ಉಸ್ಮಾನ್ ಫೈಝಿ ಯವರು ಅಧ್ಯಕ್ಷತೆಯನ್ನು ವಹಿಸಲಿದ್ದು. ಬೆಳ್ತಂಗಡಿ ಜಿಫ್ರಿ ತಂಙಳ್ ಮೌಲಿದ್ ಮಜ್ಲಿಸಿನ ನೇತೃತ್ವವನ್ನು ವಹಿಸಲಿದ್ದಾರೆ. ಉತ್ತರ ಕನ್ನಡ ಜಿಲ್ಲಾ ಖಾಝಿ ಇಶ್ತಿಕೇ ಅಹ್ಮದ್ ಖಾನ್ ಮುಫ್ತಿ ರವರು ಮದ್ಹುರ್ರಸೂಲ್ ಪ್ರಭಾಷಣಮಾಡಲಿದ್ದಾರೆ . ವಿದ್ವಾಂಸರಾದ ಶೇಕ್ ಮುಹಮ್ಮದ್ ಫೈಝಿ,ಝುಬೈರ್ ಫೈಝಿ, ಅಬ್ದುಲ್ ಕರಿಂ ಫೈಝಿ, ಸಿರಾಜುದ್ದೀನ್ ಫೈಝಿ ಮೊದಲಾದವರು ಉರ್ದು, ಮಲೆಯಾಳಂ, ಕನ್ನಡ ದಲ್ಲಿ ಸಂದೇಶ ನೀಡಲಿದ್ದಾರೆ. ಅಲ್ಲದೆ ಇನ್ನಿತರ ಉಲಮಾ ಉಮರ ಪ್ರಮುಖರೂ ಸಾಮಾಜಿಕ, ಶೈಕ್ಷಣಿಕ ರಂಗದ ಮೇಧಾವಿಗಳು ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದು ರಾಜ್ಯಫೈಝೀಸ್ ಹಿರಿಯ ನೇತಾರರ ನಾಯಕತ್ವದಲ್ಲಿ ರಾಜ್ಯದ ವಿವಿಧ ಜಿಲ್ಲೆಗಳಿಂದ ಫೈಝಿ ವಿದ್ವಾಂಸರು ಭಾಗವಹಿಸಲಿದ್ದಾರೆಂದು ರಾಜ್ಯ ಫೈಝೀಸ್ ಪ್ರಧಾನ ಕಾರ್ಯದರ್ಶಿ ಅಶ್ರಫ್ ಫೈಝಿ ಮಿತ್ತಬೈಲು ತಿಳಿಸಿದ್ದಾರೆ

Share this on:
error: Content is protected !!